ವರನಟ ಡಾ.ರಾಜಕುಮಾರ ಅತ್ಯಂತ ಪ್ರೀತಿಯ ಕಿರಿಯ ಪುತ್ರ ನಟ ಪವರಸ್ಟಾರ್ ಪುನೀತ್ ರಾಜಕುಮಾರ ನಿಧನಕ್ಕೆ, ಹುಬ್ಬಳ್ಳಿಯಲ್ಲಿ ಜಿಮ್‌ಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಗರದ ಮಸಲ್ಸ್ ಫ್ಯಾಕ್ಟರಿ ಹಾಗೂ ಅಲ್ಟಿಮೆಟ್ ಫಿಟ್ನೆಸ್ ಜಿಮ್‌ನಲ್ಲಿ ಅಪ್ಪುವಿನ ಭಾವಚಿತ್ರವಿಟ್ಟು ವಿಶೇಷ ಪೂಜೆ ಸಲ್ಲಿಸಿ ಜಿಮ್‌ನ್ ಯುವಕರು ಹಾಗೂ ಮಾಲೀಕರು ಅಗಲಿನದ ನಟ ಪುನೀತ ರಾಜಕುಮಾರವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಬಳಿಕ ಒಂದು ನಿಮಿಷ ಮೌನಾಚಾರ ಮಾಡುವ ಮೂಲಕ ಕುಟುಂಬಸ್ಥರಿಗೆ, ಸ್ನೇಹ ಬಳಗಕ್ಕೆ ಹಾಗೂ ಅಭಿಮಾನಿಗಳಿಗೆ ದೇವರು ದುಖ ಭರಿಸುವ ಶಕ್ತಿ ನೀಡಲಿ ಎಂದು ದೇವರಿಲ್ಲಿ ಕೇಳಿಕೊಂಡರು. ಶ್ರದ್ಧಾಂಜಲಿ ಕಾರ್ಯಕ್ರಮದ ಬಳಿಕ ಪುನೀತ ರಾಜಕುಮಾರ ಸರಳತೆ, ಸ್ನೇಹಮಯ ನಡವಳಿಕೆಯನ್ನು ಹಾಗೂ ಹಿರಿಯರಿಗೆ ಅವರು ನೀಡುತ್ತಿದ್ದ ಗೌರವವನ್ನು ಅಪ್ಪುರವರ ಸಮಾಜಿಕ ಕಾರ್ಯಗಳನ್ನು ಈ ವೇಳೆ ಮೆಲುಕು ಹಾಕಲಾಯಿತು. ಈ ಸಂದರ್ಭದಲ್ಲಿ ಲುಕ್ ಗುಂಡಿಮನಿ , ಶರೀಫ ಮುಲ್ಲಾ , ತಹಸಿನ ಮುಲ್ಲಾ, ಸಮೀರ್ ಹಾಗೂ ಇತರರು ಉಪಸ್ಥಿತರಿದ್ದರು.