ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಬಿ ಫಾರ್ಮ್ ಪಡೆದು ಚುನಾವಣೆಗೆ ಸ್ಪರ್ಧೆ ಮಾಡಿದ ಅಭ್ಯರ್ಥಿಯೊಬ್ಬರಿಗೆ ಹೃದಯಾಘಾತವಾಗಿದ್ದು, ಈ ಹಿನ್ನೆಲೆಯಲ್ಲಿ ಹೃದಯಾಘಾತವಾದ ಕೈ ಪಕ್ಷದ ಅಭ್ಯರ್ಥಿ ತನ್ನ ಬಿ ಫಾರ್ಮ್‌ನ್ನು ವರಿಷ್ಠರಿಗೆ ಹಿಂದಿರುಗಿಸಿದ್ದಾರೆ.
ಧಾರವಾಡ ನಗರದ 13ನೇ ವಾರ್ಡಿನಿಂದ ಟಿಕೆಟ್ ಪಡೆದಿದ್ದ ಆನಂದ ಜಾಧವ ಅವರಿಗೆ ಕಳೆದ ದಿನ ಕೋರ್ಟ್ ಅಪಿಡೆವೇಟ್ ಮಾಡುವ ಸಮಯದಲ್ಲಿ ಹೃದಯಾಘಾತವಾಗಿ ಕುಸಿದು ಬಿದಿದ್ದರು. ಕೂಡಲೇ ಸ್ಥಳದಲ್ಲಿದ್ದ ಅವರ ಬೆಂಬಲಿಗರು ಹಾಗೂ ಸ್ನೇಹಿತರು ಕೂಡಿಕೊಂಡು ಆನಂದ ಜಾದವ ಅವರನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಆನಂದ ಜಾದವ್ ಅವರಿಗೆ ವೈದ್ಯರು ವಿಶ್ರಾಂತಿ ಪಡೆಲು ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಪಾಲಿಕೆಯ 13 ನೇ ವಾರ್ಡಿನ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಆನಂದ ಜಾದವ ಅವರು ತಮ್ಮ ನೀಡಲಾಗಿದ್ದ ಬಿ ಫಾರ್ಮ್ ಅವನ್ನು ಮರಳಿ ವರಿಷ್ಠರಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆನಂದ ಜಾಧವ ಅವರ ಭೀ ಫಾರ್ಮ ಮರಳಿ ಪಡೆದಿದ್ದು, ಪಕ್ಷದಲ್ಲಿ ಬಂಡಾಯವೆದ್ದಿದ್ದ ಹೇಮಂತ ಗುರ್ಲಹೊಸೂರ ಅವರಿಗೆ ನೀಡಿಲಾಗಿದೆ ಎಂದು ಹೇಳಲಾಗಿದೆ.