ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಹಾಗೂ ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಅಗ್ರಹಿಸಿ, ಧಾರವಾಡದಲ್ಲಿ ಮಹಿಳಾ ಮಣಿಗಳು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ, ಎಐಯುಟಿಯುಸಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಯರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಈಗಾಗಲೇ ದೇಶವ್ಯಾಪಿ ಬೆಲೆ ಏರಿಕೆಗಳಿಂದಾಗಿ ಮಧ್ಯಮ ವರ್ಗದ ಜನರು ತತ್ತರಿಸಿ ಹೋಗಿದ್ದಾರೆ. ಪ್ರತಿ ತಿಂಗಳು ಗೃಹ ಬಳಕೆ ಸಿಲಿಂಡರ ಬೆಲೆ ಏರುತ್ತಲೆ ಸಾಗಿದೆ. ಇದರ ಜೊತೆಗೆ ಅಗತ್ಯ ವಸ್ತುಗಳ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಇದರಿಂದಾಗಿ ಈಗ ಮಧ್ಯಮ ವರ್ಗದ ಕುಟುಂಬಗಳು ಬಿದಿಗೆ ಬರುವ ಪರಿಸ್ಥಿತಿಯನ್ನು ಇಂದಿನ ಸರ್ಕಾರಗಳು ಜನರಿಗೆ ತಂದಿವೆ. ಕೊರೊನಾ ಅನ್ ಲಾಕ್ ನಂತರ ಸಹಜ ಸ್ಥತಿಗೆ ಮರಳುತ್ತಿರುವ ಕುಟುಂಬದ ಆರ್ಥಿಕ ಸ್ಥಿತಿ, ಬೆಲೆಗಳ ಏರಿಕೆಯಿಂದಾಗಿ ಮತ್ತೆ ಹಳಿ ತಪ್ಪುತ್ತಿವೆ. ಬೆಲೆಗಳ ಏರಿಕೆ ನಿಯಂತ್ರಣ ಮಾಡುವುದರಲ್ಲಿ ಕೇಂದ್ರ ಬಿಜೆಪಿ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲವಾಗಿ. ಕೂಡಲೇ ಸರ್ಕಾರಗಳು ಬೆಲೆ ಏರಿಕೆಯನ್ನು ತಡೆಗಟ್ಟಬೇಕು ಇಲ್ಲವಾದಲ್ಲಿ ಜನತೆಯೇ ಮುಂದಿನ ದಿನಗಳಲ್ಲಿ ಬಿದಿಗೆ ಇಳಿದು ಪ್ರತಿಯೊಂದು ಪ್ರದೇಶದಲ್ಲಿ ಪ್ರತಿಭಟನೆ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧ ನೀತಿಗಳನ್ನು ಖಂಡಿಸಿ ದೆಹಲಿ ಸೇರಿದಂತೆ ದೇಶವ್ಯಾಪಿ ರೈತರು ಪ್ರತಿಭಟನೆ ಮಾಡಿ ವಿರೋಧ ವ್ಯಕ್ತಪಡಿಸುತ್ತಾ ಬರುತ್ತಿದ್ದಾರೆ. ಹೀಗಿದ್ದರೂ ಕೂಡಾ ಪ್ರಧಾನ ಮಂತ್ರಿ ನರೇಂದ್ರ ಪ್ರತಿಭಟನಾ ರೈತರ ಬೇಡಿಕೆ ಆಲಿಸುವ ಪ್ರಯತ್ನ ಮಾಡುತ್ತಿಲ್ಲ. ಕೂಡಲೇ ರೈತ ವಿರೋಧಿ ಕಾನೂನನ್ನು ಪ್ರಧಾನಿಗಳು ಕೈ ಬೀಡಬೇಕು ಎಂದು ಇದೇವೇಳೆ ಒತ್ತಾಯಿಸಿದರು.