ಹುಬ್ಬಳ್ಳಿ : ಹಾನಗಲ್ ನಲ್ಲಿ ಮತದಾರರು ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ.ಬಿಜೆಪಿಯವರು ಸುಳ್ಳು ಹೇಳಿ ಪ್ರಚಾರ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಹಾನಗಲ್ ಉಪಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವ ಮುನ್ನ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಿಜೆಪಿ ಅಭಿವೃದ್ಧಿ ಮೇಲೆ ಮತ ನೀಡಿ ಅಂತಿದ್ದಾರೆ. ಅವರು ಮಾಡಿದ ಅಭಿವೃದ್ದಿಯ ಪಟ್ಟಿ ಮಾಡಿ ಹೇಳಲಿ.
ದುಡ್ಡು ಖರ್ಚು ಮಾಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ನಾನು ಸಿಎಂ ಆದ ಮೇಲೆ ಹಾವೇರಿಗೆ ಏನು ಕೊಟ್ಟಿದ್ದೇನೆ ಅಂತಾ ಮನೋಹರ್ ತಹಶಿಲ್ದಾರರನ್ನ ಕೇಳಲಿ. ನಾನು 2400 ಕೋಟಿ ಕೊಟ್ಟಿದ್ದೇನೆ. ಸಿಎಂ ಬೊಮ್ಮಾಯಿ ಸುಳ್ಳು ಹೇಳಿ ಪ್ರಚಾರ ಮಾಡುತ್ತಿದ್ದಾರೆ ಎಂದರು.
ಕಾಂಗ್ರೆಸ್ ಜಾತಿ ಧರ್ಮಗಳನ್ನ ಒಡೆಯುವ ಕೆಲಸ ಮಾಡುತ್ತಿದ್ದಾರೆ ಅಂತಾ ಸಿಎಂ ಹೇಳುತ್ತಿದ್ದಾರೆ. ನಮ್ಮಗೆ ಅದು ಗೊತ್ತಿಲ್ಲ. ಅವರ ಬಳಿ ಮುಸ್ಲಿಂ ಮಂತ್ರಿ ಇದಾರಾ.. ಅವರನ್ನ ಯಾಕೆ ಸಚಿವರನ್ನಾಗಿ ಮಾಡಲಿಲ್ಲ. ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂದವರು ಯಾರು..?
ನಾವೂ ಅಧಿಕಾರಕ್ಕೆ ಬಂದಿರೋದೇ ಸಂವಿಧಾನ ಬದಲಾವಣೆ ಮಾಡ್ತೇವಿ ಅಂದವರು ಅವರೇ ಅಲ್ವಾ.. ಅದು ಅಧಿಕೃತ ಆಯ್ತು ಅಲ್ವಾ..
ಜನರು ಹೇಳುತ್ತಿದ್ದಾರೆ. ಅವರಿಗೆ ಅಭಿವೃದ್ಧಿ ಬಗ್ಗೆ ಹೇಳಲು ಏನೂ ಇಲ್ಲ.. ಅದಕ್ಕೆ ದುಡ್ಡು ಖರ್ಚು ಮಾಡುತ್ತಿದ್ದಾರೆ. ದುಡ್ಡು ಹಂಚಿಕೆ ಬಗ್ಗೆ ಆಯೋಗಕ್ಕೆ ದೂರು ನೀಡುವುದನ್ನ ಅವರ ಬಳಿ ಹೇಳಿಸಿಕೊಂಡು ಮಾಡಬೇಕಾ. ಅದನ್ನ ನಾವೂ ಮಾಡ್ತೀವಿ ಎಂದರು.
ಕೋವಿಡ್ ನೂರು ಕೋಟಿ ಅಂತಾ ಸಂಭ್ರಮ ಮಾಡ್ತಾ ಇದಾರೆ. 29 ಕೋಟಿ ಮಾತ್ರ ಎರಡು ಡೋಸ್ ನೀಡಿದ್ದಾರೆ.
43 ಕೋಟಿ ಮೊದಲ ಡೋಸ್ ನೀಡಿದ್ದಾರೆ. ಸತ್ತವರ ಸಂಖ್ಯೆ ಎಷ್ಟು..? 52 ಲಕ್ಷ ಜನ ಸತ್ತಿದ್ದಾರೆ. ಆಕ್ಸಿಜನ್ ಬೆಡ್. ಔಷಧಿ ಕೊಡದೇ ಇರುವುದಕ್ಕೆ 50 ಲಕ್ಷ ಜನರು ಸತ್ತಿದ್ದಾರೆ.
ರಾಜ್ಯದಲ್ಲಿ ನಾಲ್ಕು ಲಕ್ಷ ಜನರು ಮೃತಪಟ್ಟಿದ್ದಾರೆ.
ನಿರಾಣಿ. ಬೊಮ್ಮಾಯಿಗೆ ಗೊತ್ತಿದೆ, ಹಾನಗಲ್ ನಲ್ಲಿ ಬಿಜೆಪಿ ಸೋಲುತ್ತೆ ಅಂತಾ ಗೊತ್ತಿದೆ. ಬಿಎಸ್ ವೈ ಬಂದ ಮೇಲೆ ಅಲೆ ಎದ್ದಿದೇಯ್ಯಾ..? ಬೊಮ್ಮಾಯಿ ಬಂದಾಗ ಅಲೆ ಇರಲಿಲ್ವಾ…? ಎಂದು ವ್ಯಂಗ್ಯವಾಡಿದರು.