Home / ರಾಜಕೀಯ / ಬಿ.ಎಸ್.ವೈ ಆರ್.ಎಸ್.ಎಸ್ ನಿಂದ ಬಂದವರು ನಾವು ಅವರು ತದ್ವಿರುದ್ಧ: ಸಿದ್ಧರಾಮಯ್ಯ

ಬಿ.ಎಸ್.ವೈ ಆರ್.ಎಸ್.ಎಸ್ ನಿಂದ ಬಂದವರು ನಾವು ಅವರು ತದ್ವಿರುದ್ಧ: ಸಿದ್ಧರಾಮಯ್ಯ

Spread the love

ಹುಬ್ಬಳ್ಳಿ : ನಾನು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದು ಅಪ್ಪಟ ಸುಳ್ಳು. ಯಾರಾದರು ಅದನ್ನು ಪ್ರೂವ್ ಮಾಡಿದರೇ ನಾನು ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತೆನೆ. ಬಿ.ಎಸ್. ವೈ ಅವರು, ಆರ್.ಎಸ್.ಎಸ್ ನಿಂದ ಬಂದವರು‌. ನಾವು ಅವರು ತದ್ವಿರುದ್ಧ, ಅವರನ್ನು ಭೇಟಿಯಾಗಿದ್ದು ಸುಳ್ಳು ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.

ಹಾನಗಲ್ ಉಪಚುನಾವಣೆ ಪ್ರಚಾರದ ಹಿನ್ನಲೆಯಲ್ಲಿ ಹುಬ್ಬಳ್ಳಿ ವಿಮಾನ‌ ನಿಲ್ದಾಣಕ್ಕಾಗಮಿಸಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಅಧಿಕಾರದಲ್ಲಿರುವವರ ಮನೆ ಬಾಗಿಲಿಗೆ ನಾನು ಯಾವತ್ತು ಹೋಗಿಲ್ಲ. ಅದು ನನ್ನ ಪ್ರಿನ್ಸಿಪಲ್,ಹೀಗಾಗಿ ನಾನು ಬಿಎಸ್ ವೈ ಭೇಟಿಯಾಗಿಲ್ಲ ಎಂದರು.

ಸಲೀಂ-ಉಗ್ರಪ್ಪ ಸಂಭಾಷೆ ಹಿಂದೆ ಸಿದ್ದು ಕೈವಾಡ ಎನ್ನುವ ಶೆಟ್ಟರ್ ಆರೋಪ ವಿಚಾರವಾಗಿ ಪ್ರತಿಕ್ರಿಯೆ ‌ನೀಡಿದ ಅವರು, ಹಾಗಿದ್ದರೆ ಯತ್ನಾಳ್,ವಿಶ್ವಾನಾಥ ಅವರಿಗೂ ನಾನೇ ಹೇಳಿದ್ನಾ..? ಹಿಂದೆ ಅನಂತಕುಮಾರ-ಬಿಎಸ್ ವೈ ಮಾತನಾಡಿದ್ದರು ಅದಕ್ಕೂ ನಾನೇ ಕಾರಣನನಾ..?ಇವರೆಲ್ಲಾ ಸಿಎಂ ಆದವರು ಹೀಗೇ ಮಾತನಾಡಿದರೇ ಹೇಗೆ. ಎಲ್ಲದಕ್ಕೂ ಸಿದ್ದರಾಮಯ್ಯ ಟಾರ್ಗಟ್ ಮಾಡಿದರೆ ಹೇಗೆ. ಜಾತಿ ಸಮೀಕ್ಷೆ ಬಗ್ಗೆ ಕೂಡಾ ಜಗದೀಶ್ ಶೆಟ್ಟರ್ ಸುಳ್ಳು ಹೇಳ್ತಿದ್ದಾರೆ‌. ನನ್ನ ಕಾಲದಲ್ಲಿ ಸಮೀಕ್ಷೆ ಪೂರ್ಣ ಆಗಿದ್ದರೆ ನಾನೇ ಹೊರ ತರುತ್ತಿದ್ದೆ ಎಂದು ಅವರು ಹೇಳಿದರು.

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 101ಕ್ಕೆ ಸ್ಥಾನಕ್ಕೆ ಬಂದಿದೆ. ಇದು ಪ್ರಧಾನಿ‌‌ ಮೋದಿಯವರ ಕೊಡುಗೆ.ನಾನು ದೇಶ ಉದ್ದಾರ, ಸ್ವರ್ಗ, ಅಚ್ಚೇ ದಿನ್ ಮಾಡ್ತಿನಿ ಎಂದವರು. ಇವಾಗ ಜನ ಹಸಿವನಿಂದ ಬಳಲುವಂತೆ ಮಾಡಿದೆ ಎಂದ ಅವರು, ಅನ್ನಭಾಗ್ಯ ಯೋಜನೆ ಸೋಮಾರಿಗಳನ್ನು ಮಾಡ್ತಿದೆ ಎನ್ನೋ ಹೆಚ್ ಡಿಕೆ ಆರೋಪವಾಗಿ ಮಾತನಾಡಿ ಹೊಟ್ಟೆ ತುಂಬಿದವರು ಹಾಗೇ ಹೇಳ್ತಾರೆ ಹಸಿವು ಯಾರು ಅನುಭವಿಸಿದ್ದಾರೆ ಅವರು ಯಾರು ಈ ರೀತಿ ಹೇಳಲ್ಲ. ಅವರು ಹೇಳಿದ್ದೆಲ್ಲಾ ವೇದ ವ್ಯಾಕ್ಯವಲ್ಲ. ಬಡವರು ಆ ಬಗ್ಗೆ ಹೇಳಲಿ, ಅವರು ಅಕ್ಕಿ ಕೊಡಬೇಡಿ ಅಂತ ಹೇಳ್ತಾರಾ..? ಎಂದು ಪ್ರಶ್ನಿಸಿದರು.

ಸಿದ್ದು-ಡಿಕೆಶಿ ಬೇರೆ ಕಡೆ ಪ್ರಚಾರ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು,ಶೆಟ್ಟರ್-ಬೊಮ್ಮಾಯಿ ಒಂದೇ ಕಡೆ ಹೋಗ್ತಾರಾ..?ಎಲ್ಲಾ ಕಡೆ ಕವರ್ ಮಾಡಬೇಕು ಅಂದರೆ ಬೇರೆ ಬೇರೆ ಕಡೆ ಪ್ರಚಾರ ಮಾಡಲೇಬೇಕು. ಹಾನಗಲ್,ಸಿಂದಗಿ ನಮಗೆ ಒಳ್ಳೆ ವಾತಾವರಣವಿದೆ ಎಂದು ಅವರು ಹೇಳಿದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]