ಕಳೆದ ಅಧಿವೇಶನ ಗೂಳಿಹಟ್ಟಿಯವರು ತಮ್ಮ ತಾಯಿಯ ಮತಾಂತರದ ಬಗ್ಗೆ ಪ್ರಸ್ತಾಪ ಮಾಡಿದಾಗ ಸದನದಲ್ಲಿ ಇದ್ದ ಎಲ್ಲರಿಗೂ ನೋವಾಗಿದೆ. ಇತ್ತೀಚೆಗೆ ಕೆಲವು ಕ್ರಿಶ್ಚಿಯನ್‌ನಯರು ಮತಾಂತರ ಕಾರ್ಯದಲ್ಲಿ ಹೆಚ್ಚು ತೊಡಗಿಕೊಂಡಿರುವುದು ಕೂಡ ನೀಜ. ಹಾಗಾಗಿ ಈ ಬಲಂತವಾಗಿ ಹಾಗೂ ಆಮಿಷ ಒಡ್ಡಿ ಮತಾಂತರ ಮಾಡುವವರ ವಿರುದ್ಧ ಕಠಿಣ ಕಾನೂನು ತರುವುದು ಅವಶ್ಯವಾಗಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕ್ರಿಶ್ಚಿಯನ್ ಮತಾಂತರಕ್ಕೆ ಹೆಚ್ಚು ದಲಿತ ಸಮುದಾಯದ ಜನತೆ ಬಲಿಯಾಗಿತ್ತಿದ್ದಾರೆ. ಇತ್ತೀಚೆಗೆ ಲಿಂಗಾಯತರು ಕೂಡಾ ಮತಾಂತರವಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಕಳೆದ ಅಧಿವೇಶನದಲ್ಲಿ ಗೃಹ ಸಚಿವರು ಕೂಡಾ ಇದರ ಬಗ್ಗೆ ದೂರು ಬರುತ್ತಿವೆ, ಇದರ ಕುರಿತು ಒಂದು ಕಟ್ಟುನಿಟ್ಟಿನ ಕಾನೂನು ತರುತ್ತೇವೆ ಎಂದು ತಿಳಿಸಿದ್ದಾರೆ. ನಮ್ಮ ಅಭಿಪ್ರಾಯ ಕೂಡಾ ಅದೇ ಆಗಿದೆ ಎಂದರು.
ಜನರು ತಾವೇ ಒಪ್ಪಿಕೊಂಡು ಬೇರೆ ಧರ್ಮಕ್ಕೆ ಹೋಗುವುದು ಬೇರೆಯಾಗುತ್ತಿದೆ. ಆದರೆ ಇಲ್ಲಿ ಬಲವಂತವಾಗಿ ಕೆಲವು ಅಮಿಷಗಕಲನ್ನು ತೋರಿಸಿ ಮತಾಂತರ ಮಾಡಲಾಗುತ್ತಿದೆ. ಬೀದರ್ ಸೇರಿದಂತೆ ಬೇರೆ ಕಡೆ ನಾವು ಹೋದಾಗ ಈ ನಗ್ಗೆ ನಮ್ಮಗೂ ಕೂಡಾ ದೂರುಗಳು ಬಂದಿವೆ. ಹಾಗಾಗಿ ಗೃಹ ಮಂತ್ರಿಗಳು ಇದರ ಬಗ್ಗೆ ಕಠಿಣ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.