ಹುಬ್ಬಳ್ಳಿ : ನಗರದಲ್ಲಿಂದು ಇದೇ ಮೊದಲ ಬಾರಿಗೆ ರಜತ ಉಳ್ಳಾಗಡ್ಡಿಮಠ ಫೌಂಡೇಶನ್ ಅಯೋಜಿಸಿದ 200 ಸಾರ್ವಜನಿಕರ ಗಣೇಶ ಉತ್ಸವ ಮಂಡಳಿಗಳಿಗೆ ತಲಾ 10 ಗ್ರಾಂ ತೂಕದ ಬೆಳ್ಳಿ ನಾಣ್ಯ ವಿತರಣೆ ಕಾರ್ಯಕ್ರಮವನ್ನು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಚಾಲನೆ ನೀಡಿದರು.
ನಗರದಲ್ಲಿ ಭಾವೈಕ್ಯತೆಯ ಸೌಹಾರ್ದತೆಯ ಗಣೇಶ್ ಉತ್ಸವ ಮಂಡಳಿಗಳಿಗೆ ತಲಾ 10 ಗ್ರಾಂ ತೂಕದ 200 ಬೆಳ್ಳಿ ನಾಣ್ಯಗಳನ್ನು (ಅಂದರೇ 2 ಕೆಜಿ ಬೆಳ್ಳಿ) ಇಂದು ಸಾಂಕೇತಿಕವಾಗಿ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಬಿಡುಗಡೆ ಮಾಡಿ, ಧಾರವಾಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಇಂತಹ ಅದ್ದೂರಿ ಕಾರ್ಯಕ್ರಮದಲ್ಲಿ ಉಳ್ಳಾಗಡ್ಡಿಮಠ ಚಿಕ್ಕ ವಯಸ್ಸಿನಲ್ಲಿ ವಾಣಿಜ್ಯನಗರಿಯ 200 ಗಣೇಶ್ ಉತ್ಸವ ಸಮಿತಿಗಳಿಗೆ ಬೆಳ್ಳಿ ನಾಣ್ಯವನ್ನು ವಿತರಣೆ ಮಾಡುತಿರುವುದು ಪ್ರಶಂಸನೀಯವಾಗಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಈ ಸಂದರ್ಭದಲ್ಲಿ ಅನಿಲಕುಮಾರ ಪಾಟೀಲ, ಶಹಜಮಾನ್ ಮುಜಾಹಿದ್ ಉಪಸ್ಥಿತರಿದ್ದರು