ಹುಬ್ಬಳ್ಳಿ: ಆಪರೇಷನ್ ಕಮಲ ನೈಸರ್ಗಿಕವಾದ ಪ್ರಕ್ರಿಯೆ. ಚುನಾವಣೆ ಹತ್ತಿರ ಬಂದ ಹಾಗೇ ಬಿಜೆಪಿಯತ್ತ ಇತರ ಪಕ್ಷದವರು ಹರಿದುಬರಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ತಿಳಿಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಭಾರತೀಯ ಜನತಾ ಪಕ್ಷ ಪ್ರಸ್ತುತವಾದ, ಜನಪರವಾದ, ಜನರ ಪಕ್ಷವಾದ ಪಕ್ಷವಾಗಿದೆ. ಬೇರೆ ಬೇರೆ ಪಕ್ಷಗಳು ಕೇವಲ ಕುಟುಂಬಕ್ಕೆ ಸೀಮಿತವಾಗಿ, ಎಲ್ಲೋ ಒಂದು ಕಡೆಗೆ ಬೆಳೆಯಲು ಪ್ರಜಾಪ್ರಭುತ್ವದ ತತ್ವ ಅಥವಾ ಅದರ ಆಧಾರಿತವಾಗಿ ಕಾರ್ಯ ಮಾಡುತ್ತಿಲ್ಲ. ಅದರಲ್ಲಿ ಕೆಲವೊಂದು ನಿರ್ಬಂಧಗಳಿವೆ. ಯಾವ ಪಕ್ಷದಲ್ಲಿ ಭವಿಷ್ಯ ಕಾಣುವುದಿಲ್ಲ. ಅಂತಹ ಪಕ್ಷದಲ್ಲಿ ಯಾರು ಇರಲು ಬಯಸುವುದಿಲ್ಲ. ಬಿಜೆಪಿಯಲ್ಲಿ ಎಲ್ಲರಿಗೂ ಅವಕಾಶ ಸಿಗುವಂತಿದೆ. ಹಾಗಾಗಿ ಬೇರೆ ಪಕ್ಷಗಳಿಂದ ಬರುವವರಿಗೆ ಸ್ವಾಗತ ಇದೆ ಎಂದರು.
Hubli News Latest Kannada News