ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಘಟನೆಯ ಹಿಂದೆ ಯಾವುದೇ ವ್ಯಕ್ತಿ, ಸಂಘಟನೆ ಇದ್ರೂ ಬಿಡಲ್ಲ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು..
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಡಿ.ಪಿ.ಐ, ಪಿ.ಎಫ್.ಐ ಬಗ್ಗೆ ಕೆಲ ತನಿಖೆ ನಡಿತಿದೆ. ಇವು ರಾಜಕೀಯ ಸಂಘಟನೆಗಳು ಇರೋದ್ರಿಂದ ಅದನ್ನು ಸರ್ಕಾರಕ್ಕೆ ಹೇಳಿದ್ದೇವೆ ಎಂದರು.
ಬಂಧಿತರು ಅಮಾಯಕರು ಎಂಬ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಅವರು, ಬಂಧಿತರು ಅಮಾಯಕರು ಅಂತ ಇವರಿಗೆ ಹೇಗೆ ಗೊತ್ತು. ತನಿಖೆಗೂ ಮೊದಲೇ ಅಮಾಯಕರು ಅಂತ ಹೇಗೆ ಹೇಳ್ತಿರಾ? ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರು ಇದ್ದಾರೆ. ನ್ಯಾಯಾಂಗವೂ ಇದೆ ಎಂದರು.
ಗುಂಡಾಗಳ ಆಸ್ತಿ-ಪಾಸ್ತಿ ಜಪ್ತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆಸ್ತಿ-ಪಾಸ್ತಿ ಜಪ್ತಿಯನ್ನು ಎಲ್ಲಾ ಕಡೆಗಳಲ್ಲಿಯೂ ಮಾಡೋಕ ಆಗೋಲ್ಲ. ಇರೋ ಕಾನೂನನ್ನೇ ಕಟ್ಟುನಿಟ್ಟಾಗಿ ಬಳಸಿದ್ರೆ ಸಾಕು. ಆ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.