ಹುಬ್ಬಳ್ಳಿ : ಬಿಜೆಪಿಯವರು ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಜನರ ಮುಂದೆ ಹೋಗೋಕ್ಕೆ ಅವರ ಬಳಿ ಸಾಧನೆ ಇಲ್ಲ. ಹಾಗಾಗಿ ಅದನ್ನು ಮರೆಮಾಚಲು ಧಾರ್ಮಿಕ ವಿಚಾರಕ್ಕೆ ಮುಂದಾಗಿದ್ದಾರೆ. ಧರ್ಮದ ಹೆಸರಿನ ಮೇಲೆ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.
ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೀದಿಯಲ್ಲಿ ಮೈಕ್ ಬಳಸುವ ವಿಷಯ ಇದೀಗ ಬಂದಿದೆ. ಮಾವಿನ ಹಣ್ಣು ಹಿಂದೂ-ಮುಸ್ಲಿಂ ಬಹಳ ವರ್ಷದಿಂದ ವ್ಯಾಪಾರ ಮಾಡತ್ತಾ ಇದ್ದಾರೆ. ನಮ್ಮೂರಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಹಣ್ಣು ಕೊಡುತ್ತಿದ್ದೇವು. ಆದರೆ ಬಿಜೆಪಿ ಹಿಂದೂಗಳ ಮತ ಕ್ರೂಡಿಕರಣ ಮಾಡಬೇಕೆಂದು ಹೀಗೆ ಮಾಡುತ್ತಿದ್ದಾರೆ. ಧರ್ಮದ ಹೆಸರಿನ ಮೇಲೆ ಜನರ ದಾರಿ ತಪ್ಪಿಸುತ್ತಿದ್ದಾರೆ. ಇದೆಲ್ಲ ಹುನ್ನಾರ ಜನರಿಗೆ ಗೊತ್ತಾಗುತ್ತದೆ ಎಂದರು.
ಇನ್ನೂ ಜಾತ್ರೆಗಳಲ್ಲಿ ಸಹ ಎಲ್ಲರೂ ವ್ಯಾಪಾರ ಮಾಡುತ್ತಿದ್ದರು. ಹಲಾಲ್ ಮುಸ್ಲಿಂರು ಕಟ್ ಮಾಡಿದ್ದೆ ನಾವು ತಿನ್ನೋದು. ತಿನ್ನದೇ ಇರುವವರು ಹೀಗೆ ಮಾಡುತ್ತಿದ್ದಾರೆ. ಅವರ ನಂಬಿಕೆ ಹಲಾಲ್ ಮಾಡೋದು, ಕುರಿಗಳಲ್ಲಿ ರಕ್ತ ಇರಬಾರದು, ಅನ್ನೋದ ಅವರ ನಂಬಿಕೆ. ನಾವು ಕುರಿ ಕಡಿದರೆ ಅವರನ್ನೇ ಕರೆಸಿ ಕ್ಲಿನದ ಮಡಿಸತ್ತಿದ್ದೇವು. ಈಗ ಬೆಲೆ ಏರಿಕೆ ಬಗ್ಗೆ ಯಾಕೆ ಯಾರು ಮಾತನಾಡುತ್ತಿಲ್ಲ. ಗೊಬ್ಬರ ಸಹ ಏರಿಕೆ ಆಗಿದೆ. ಗ್ಯಾಸ್, ಅಡುಗೆ, ಎಣ್ಣೆ ಸೇರಿದಂತೆ ದೈನಂದಿನ ವಸ್ತುಗಳ ಬೆಲೆ ಏರಿಕೆ ಆಗಿದೆ. ಆದರೆ ಯಾರು ಮಾತನಾಡುತ್ತಿಲ್ಲ ಎಂದ ಅವರು ಧಾರ್ಮಿಕ ಭಾವನೆ ಕೆರಳಿಸುವಂತದ್ದನ್ನು ನಾವು ಖಂಡಿಸುತ್ತೇವೆ ಎಂದರು.
ಬೆಂಗಳೂರಿನ ಗೌರಿಪಾಳ್ಯ ಚಂದ್ರು ಹತ್ಯೆ ಪ್ರಕರಣ ಕುರಿತು ಉರ್ದು ಬರಲ್ಲ ಅನ್ನೋ ಕಾರಣಕ್ಕೆ ಹತ್ಯೆ ಆಗಿದೆ ಅನ್ನೋ ಗೃಹ ಸಚಿವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ಹೋಮ್ ಮಿನಿಸ್ಟರ್ ಗೆ ಅನುಭವವೇ ಇಲ್ಲ. ಅವರಿಗೆ ಇಲಾಖೆ ಹ್ಯಾಂಡರ್ ಮಾಡೋಕ್ಕೆ ಬರಲ್ಲ. ಈ ಹಿಂದೆ ಮೈಸೂರಿನಲ್ಲಿ ಗ್ಯಾಂಗ್ ರೇಪ್ ಆದಾಗ ಗೃಹ ಸಚಿವರು ಅಷ್ಟೋತ್ತಿಗೆ ಯಾಕ್ ಹೋಗಿದ್ರು ಅಂತ ಹೇಳಿಕೆ ಕೊಟ್ಟಿದರು. ಹೋಮ್ ಮಿನಿಸ್ಟರ್ ಆಗೋಕ್ಕೆ ಲಾಯಕ್ ಏನ್ರಿ ಇವರು? ಸಿಎಂ ಸಹ ಅವರಿಗೆ ಕುಮ್ಮಕ್ಕು ಕೊಡುತ್ತಾರೆ ಎಂದರು.
ಯಾರದ್ದೆ ಕೊಲೆಯಾದರೂ ನಾನು ಖಂಡಿಸುತ್ತೇನೆ. ಹಿಂದೂ ಸತ್ತರು, ಮುಸ್ಲಿಂ ಸತ್ತರು ಜೀವ ಜೀವವೇ, ಯಾರೇ ಇರಲಿ ಅವರ ವಿರುದ್ಧ ಕ್ರಮ ಆಗಲಿ.ನರಗುಂದದಲ್ಲಿ ಮುಸ್ಲಿಂ ಹತ್ಯೆ ಆದಾಗ ಯಾಕೆ ರಾಜ್ಯ ಸರ್ಕಾರ 25 ಲಕ್ಷ ಕೊಟ್ಟಿಲ್ಲ. ಹರ್ಷಾ ಕೊಂದವರನ್ನು ನೇಣಿಗೆ ಹಾಕಿ ಜೀವಾವಧಿ ಶಿಕ್ಷೆ ಕೊಡಿಸಿ, ಹಾಗೇ ಮುಸ್ಲಿಂ ಯುವಕನ ಹತ್ಯೆಯಾದವರಿಗೂ ಶಿಕ್ಷೆಯಾಗಲಿ ಎಂದರು.