ದಿ. ಪುನೀತ್ ರಾಜಕುಮಾರ್ ಗೆ ಇಷ್ಟವಾದ ಸಾವಜಿ ಮಟನ್ ಊಟ ವಿತರಿಸಿ ವಿಭಿನ್ನವಾಗಿ ಸ್ಮರಿಸಿದ ಅಭಿಮಾನಿಗಳು
ಹುಬ್ಬಳ್ಳಿ : ದಿ. ಪುನೀತ್ ರಾಜಕುಮಾರ ಅವರಿಗೂ ಹುಬ್ಬಳ್ಳಿಗೂ ಅವಿನಾಭಾವ ನಂಟಿದೆ. ಪುನೀತ್ ರಾಜಕುಮಾರ ಹುಬ್ಬಳ್ಳಿಗೆ ಭೇಟಿ ನೀಡಿದ್ರೆ ಸಾವಜಿ ಮಟನ್ ಊಟ ಸವಿಯದೆ ತೆರಳುತ್ತಿರಲಿಲ್ಲ.
ಜೈ ರಾಜವಂಶ ಅಭಿಮಾನಿಗಳ ಸಂಘದ ರಘು ವದ್ದಿ ನೇತೃತ್ವದಲ್ಲಿ ಅಭಿಮಾನಿಗಳಿಗೆ ಸಾವಜಿ ಮಟನ್ ಊಟವನ್ನು ವಿತರಿಸುವದ ಮೂಲಕ ದಿ. ಪುನೀತ್ ರಾಜಕುಮಾರ ಅವರನ್ನು ವಿಭಿನ್ನವಾಗಿ ಸ್ಮರಿಸಿದರು.
ನಗರದ ಅಪ್ಸರಾ ಚಿತ್ರಮಂದಿರ ಬಳಿ ಸಾವಜಿ ಮಟನ್ ಊಟವನ್ನು ವಿತರಿಸುವ ಮೂಲಕ ದಿ. ಪುನೀತ್ ರಾಜಕುಮಾರ್ ಅವರ ಹೆಸರು ಯಾವಾಗಲೂ ಅಜರಾಮರವಾಗಿರಲಿ ಎಂದು ಪ್ರಾರ್ಥಿಸಿದರು.
ಹೌದು. ಪುನೀತ್ ರಾಜಕುಮಾರ ಅವರ ಹುಟ್ಟು ಹಬ್ಬ ಹಾಗೂ ಜೇಮ್ಸ್ ಚಲನಚಿತ್ರ ನೂರು ದಿನ ಪೂರೈಸಲಿ ಎಂದು ಉದ್ದೇಶದಿಂದ ವಿಭಿನ್ನವಾಗಿ ಸ್ಮರಿಸಿದರು.