Home / Top News / ಹಿಜಾಬ್ ತೀರ್ಪು: ರಾಜ್ಯ ಹೈಕೋರ್ಟ್ ನೀಡಿದ ತೀರ್ಪು ಐತಿಹಾಸಿಕವಾಗಿದೆ, ಇದು ಸಂವಿಧಾನದ ವಿಜಯ ಎಂದು ಹೇಳಬಹುದು: ಪ್ರಮೋದ್ ಮುತಾಲಿಕ

ಹಿಜಾಬ್ ತೀರ್ಪು: ರಾಜ್ಯ ಹೈಕೋರ್ಟ್ ನೀಡಿದ ತೀರ್ಪು ಐತಿಹಾಸಿಕವಾಗಿದೆ, ಇದು ಸಂವಿಧಾನದ ವಿಜಯ ಎಂದು ಹೇಳಬಹುದು: ಪ್ರಮೋದ್ ಮುತಾಲಿಕ

Spread the love

ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಹೈಕೋರ್ಟ್ ಇಂದು ನೀಡಿರುವ ತೀರ್ಪು, ಐತಿಹಾಸಿಕವಾಗಿದ್ದು, ಇದನ್ನು ಸಂವಿಧಾನದ ವಿಜಯ ಎಂದು ಹೇಳಬಹುದಾಗಿದೆ. ಶಾಲಾ ಕಾಲೇಜುಗಳಲ್ಲಿ ಸರ್ಕಾರದ ಸಮವಸ್ತ್ರ ಕಡ್ಡಾಯ ಆದೇಶವನ್ನು ಎತ್ತಿ ಹಿಡಿದಿರುವುದು ಸ್ವಾಗತಾರ್ಹವಾಗಿದೆ ಎಂದು ಶ್ರೀ ರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಮವಸ್ತ್ರ ಕಡ್ಡಾಯವಿರುವಂತಹ ಶಾಲಾ ಕಾಲೇಜುಗಳಲ್ಲಿ ಅಲಿಯ ಸೂಚಕ ಸಮವಸ್ತ್ರವನ್ನು ಧರಿಸಬೇಕು ಹಾಗೂ ಹಿಜಾಬ್ ಧರಿಸುವಂತಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ನ್ಯಾಯಾಲಯವು ನೀಡಿದೆ. ಶಾಲಾ ಕಾಲೇಜುಗಳಲ್ಲಿ ಸರ್ಕಾರ ಜಾರಿ ಮಾಡಿದ ಸಮವಸ್ತ್ರ ಕಡ್ಡಾಯದ ಆದೇಶವನ್ನು ಎತ್ತಿ ಹಿಡಿದಿದೆ. ಹಾಗಾಗಿ ಎಲ್ಲರು ಹೈಕೋರ್ಟ್ ತೀರ್ಪುನ್ನು ಸ್ವಾಗತ ಮಾಡೋಣ ಎಂದರು.

ಶಾಲಾ ಕಾಲೇಜುಗಳಲ್ಲಿ ಯಾವುದೇ ಧರ್ಮ ಸೂಚಕ ಇರುವ ವಸ್ತ್ರಧಾರಣೆಗೆ ಅವಕಾಶವಿಲ್ಲ ಎಂಬುವುದು ಸಾಮನ್ಯ ಜನರಿಗೂ ಅದು ತಿಳಿದಿತ್ತು. ಆದರೆ ಜನ ಸಾಮಾನ್ಯರಿಗೆ ಅರ್ಥವಾಗುವ ಈ ಸಮವಸ್ತ್ರ ಕೆಡ್ಡಾಯ ಯಾಕೆ ಇವರಿಗೆ ಅರ್ಥವಾಗಲಿಲ್ಲ ಎಂಬುವುದು ನಮ್ಮಗೆ ತಿಳಿಯಲಿಲ್ಲ. ಹಿಜಾಬ್ ಇಷ್ಟೊಂದು ದೊಡ್ಡಮಟ್ಟಕ್ಕೆ ವಿವಾದವಾಗಲು ಕಾರಣ ಎಸ್‌ಡಿಪಿಐ,ಪಿಎಫ್‌ಐ ಸಂಘಟನೆಗಳೇ ಕಾರಣ ಎಂಬುವುದನ್ನು ನ್ಯಾಯಾಲಯದ ತೀರ್ಪು ಎತ್ತಿ ತೋರಿಸುತ್ತಿದೆ ಎಂದು ತಿಳಿಸಿದರು.

ಸದ್ಯ ನ್ಯಾಯಲಯ ನೀಡಿರುವ ತೀರ್ಪನ್ನು ಮುಸ್ಲಿಂ ಸಮುದಾಯ ಪಾಲನೆ ಮಾಡಬೇಕು. ಈ ಹಿಂದೆ ಮಧ್ಯಂತರ ತೀರ್ಪ ಬಂದ ಸಂದರ್ಭದಲ್ಲಿ ಹಲವು ಮುಸ್ಲಿಂ ವಿದ್ಯಾರ್ಥಿಗಳು,ಪಾಲಕರು ಹಾಗೂ ಮುಖಂಡರು ಪಾಲನೆ ಮಾಡಿರಲಿಲ್ಲ. ಮಕ್ಕಳ ಶಿಕ್ಷಣದ ಬಗ್ಗೆ ಗಮನದಲ್ಲಿಟ್ಟುಕೊಂಡು ಪೈನಲ್ ತೀರ್ಪನ್ನು ಪಾಲನೆ ಮಾಡಬೇಕು. ತೀರ್ಪು ಒ್ರಶ್ನೆ ಮಾಡಿ ಅಪೀಲ್ ಹೋಗುವುದಾದ್ದರೆ ಹೋಗಲಿ, ಆದರೆ ಈಗ ಹೈಕೋರ್ಟ್ ನೀಡಿರುವ ತೀರ್ಪನ್ನು ಎಲ್ಲರು ಪಾಲನೆ ಮಾಡಬೇಕು ಎಂದು ಕರೆ ನೀಡಿದರು. ‌

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]