ಹುಬ್ಬಳ್ಳಿ: ನಗರದ ದುರ್ಗಬೈಲ್ ಎಂ.ಜಿ. ಮಾರ್ಕೆಟ್ ಬೆಲ್ಲಾರಿಗಲ್ಲಿಯಲ್ಲಿರುವ ಎಚ್.ಎಂ. ಸ್ವಿಟ್ಸ್ ಅಂಗಡಿಗೆ ಶಾಟ್೯ ಸರ್ಕಿಟ್ ನಿಂದ ಆಕಸ್ಮಿಕ ಬೆಂಕಿ ಹತ್ತಿದ ಕಾರಣ ಅಂಗಡಿಯಲ್ಲಿರುವ ಅಪಾರ ಪ್ರಮಾದ ವಸ್ತುಗಳು ಹಾನಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು
ಬೆಂಕಿ ಹತ್ತಿದ ಸಮಯದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಜೀವ ಹಾನಿಯಾಗಿಲ್ಲ. ಬೆಂಕಿ ನೋಡಿದ ಅಂಗಡಿ ಮಾಲೀಕರು ಅಗ್ನಿಶಾಮಕ ದಳದ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು ಕೆಲ ಹೊತ್ತು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ನಂತರ ಎಚ್ಚರಿಕೆಯಿಂದ ಬೆಂಕಿ ನಂದಿಸಿದರು.
ಅಪಾರ ಪ್ರಮಾಣದ ಬೆಂಕಿ ಹತ್ತಿದ ಹಿನ್ನೆಲೆ ಕೆಲ ಹೊತ್ತು ವ್ಯಾಪಾಸ್ಥರು ಮತ್ತು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು.
ಘಂಟಿಕೇರಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.