ಹುಬ್ಬಳ್ಳಿ: ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಪಾರುಪತ್ಯ ಮೆರೆದ ಹಿನ್ನೆಲೆಯಲ್ಲಿ ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಲ್ಲಿಂದು ಹು-ಧಾ ಬಿಜೆಪಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಷಾ, ಯೋಗಿ ಆದಿತ್ಯನಾಥ ಅವರಿಗೆ
ಜಯಘೋಷಗಳನ್ನು ಕೂಗುತ್ತಾ ಬಿಜೆಪಿ ಪಕ್ಷಕ್ಕೆ ಜೈಕಾರ ಹಾಕಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಮಾತನಾಡಿದ, ಪ್ರಧಾನಮಂತ್ರಿ ಮೋದಿ, ಯೋಗಿ ಅವರ ಜೋಡಿ ದೇಶದಲ್ಲಿ ಮೋಡಿ ಮಾಡಿದ್ದು, ಖುಷಿಯ ಸಂಗತಿ. ಪಂಚರಾಜ್ಯ ಚುನಾವಣೆಯಲ್ಲಿ ೪ ಸ್ಥಾನದಲ್ಲಿ ಮುನ್ನುಡೆ ಸಾಧಿಸಿದ್ದು, ಬಿಜೆಪಿ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಚುನಾವಣೆಯಿಂದ ಕಾಂಗ್ರೆಸ್ ಧೂಳಿಪಟವಾಗಿದ್ದು, ಮುಂದಿನ ದಿನಗಳು ಬಿಜೆಪಿಯದ್ದಾಗಿದ್ದು, ದೇಶದಲ್ಲಿ ಒಳ್ಳೆಯ ಆಡಳಿತ ನಡೆಸಲಿದೆ ಎಂದು ನುಡಿದರು.
ಈ ವೇಳೆಯಲ್ಲಿ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ತಿಪ್ಪಣ್ಣ ಮಜ್ಜಗಿ, ಚಂದ್ರಶೇಖರ ಗೋಕಾಕ್, ದತ್ತಮೂರ್ತಿ ಕುಲಕರ್ಣಿ, ಪ್ರಭು ನವಲಗುಂದಮಠ, ಸಂತೋಷ ಚವ್ಹಾಣ, ಬಸವರಾಜ ಕುಂದಗೋಳಮಠ, ಅನೂಪ ಬಿಜವಾಡ, ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.