ಹುಬ್ಬಳ್ಳಿ : ಸುನಿಧಿ ಕಲಾ ಸೌರಭ ಅರ್ಪಿಸುವ ಸುಭಾಸ್ ಎನ್. ನರೇಂದ್ರ ಅವರ ನಿರ್ದೇಶನದ ಅನಾಥರ ಮಾಯಿ ನಾಟಕ ಪ್ರದರ್ಶನವು ಇದೇ ದಿ. ೬ ರಂದು ಸಂಜೆ ೬.೩೦ ಕ್ಕೆ ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಜರುಗಲಿದೆ ಎಂದು ನಿರ್ದೇಶಕ ಸುಭಾಷ ನರೇಂದ್ರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಂಧು ತಾಯಿ ಸಪಕಾಳ ಇವರ ಜೀವನಾಧಾರಿತ ನಾಟಕ ಅನಾಥರ ಮಾಯಿಯಾಗಿದ್ದು, ಉಚಿತ ಪ್ರವೇಶವಿರಲಿದೆ ಎಂದರು.
ಈ ನಾಟಕದಲ್ಲಿ ನಗರದ ೨೦ ಕ್ಕೂ ಹೆಚ್ಚು ಹವ್ಯಾಸಿ ಕಲಾವಿದರು ಅಭಿನಯಿಸುತ್ತಿದ್ದು, ಸಿಂಧುತಾಯಿ ಸಪಕಾಳ ಅವರ ಪಾತ್ರವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಹಾಗೂ ಸುಪ್ರಸಿದ್ಧ ಅಭಿನೇತ್ರಿ ವೀಣಾ ಅಠವಾಲೆ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೀಣಾ ಅಠವಾಲೆ, ಮೋಹನ ದೇಸಾಯಿ,, ಅಪ್ಪಣ್ಣ ಶೆಟ್ಟರ್ ಶೆಟ್ಟರ್, ಸಂಪದಾ ಜೋಶಿ ಸೇರಿದಂತೆ ಉಪಸ್ಥಿತರಿದ್ದರು.