ಹುಬ್ಬಳ್ಳಿ : ರಾಜ್ಯಕ್ಕೆ ಮೋದಿ ಸರ್ಕಾರದಿಂದ ಸಾವಿರಾರು ಕೋಟಿಯ ಅನುದಾನವನ್ನ ನೀಡಿದೆ.
ಏಕಪಥ ರಸ್ತೆಯನ್ನ ಷಟ್ಪಥ ರಸ್ತೆಯನ್ನಾಗಿ ಮಾಡ್ತಿದ್ದೆವೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐತಿಹಾಸಕವಾಗಿ ರಸ್ತೆಗಳ ಅನುದಾನ ರಾಜ್ಯಕ್ಕೆ ಬಂದಿದೆ. ಇಂದು ನಿತಿನ್ ಗಡ್ಕರಿಯವರು ಹಲವು ಕಾಮಗಾರಿಗಳ ಶಂಕು ಸ್ಥಾಪನೆ ಮಾಡಲಿದ್ದಾರೆ. ಬೊಮ್ಮಾಯಿ ಅವರ ಆಗ್ರಹದಿಂದ ಈ ರೀತಿ ಅನುದಾನ ಬರ್ತಿದೆ. ಸಿಎಂ ನಾವು ಸ್ನೇಹಿತರು ಹೀಗಾಗೇ ನಮ್ಮ ಮನೆಗೆ ತಿಂಡಿ ತಿನ್ನೋಲೆ ಬಂದಿದ್ದಾರೆ. ಅದರೆಲ್ಲೇನು ವಿಶೇಷತೆ ಇಲ್ಲ. ಇಲ್ಲಿಂದ ಎಲ್ಲರೂ ಬೆಳಗಾವಿಗೆ ಹೋಗುತ್ತಿದ್ದೆವೆ. ರಾಜ್ಯದ ಪರವಾಗಿ ಗಡ್ಕರಿಯವರನ್ನ ಅಭಿನಂದನೆ ಸಲ್ಲಿಸುತ್ತೆವೆ ಎಂದರು.