ಹುಬ್ಬಳ್ಳಿ : ಶ್ರೀ ಪಾಂಡವ ಸಿನಿ ಕಂಬೈನ್ಸ್ ವತಿಯಿಂದ ನನ್ ಜೊತೆ ಪೂಜಾಲಕ್ಷ್ಮೀ ಚಲನಚಿತ್ರವು ಇದೇ ದಿನಾಂಕ ೨೫ ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಟ ಯೇಶು ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಚಿತ್ರವು ೫೦ ದಿನಗಳವರೆಗೆ ಮಡಿಕೇರಿ, ತುಮಕೂರು ಸೇರಿದಂತೆ ವಿವಿಧೆಡೆ ಚಿತ್ರೀಕರಣ ಮಾಡಲಾಗಿದ್ದು, ಇದೊಂದು ನೈಜ ಘಟನೆಯ ಆಧಾರಿತ ಚಿತ್ರವಾಗಿ ಎಂದರು.
೫೦ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದ ಅವರು ಕೌಟುಂಬಿಕ ಚಿತ್ರವಾಗಿದೆ.
ಚಿತ್ರದಲ್ಲಿ ೪ ಪೈಟ್ ಇದ್ದು, ಈಗಾಗಲೇ ೩ ಹಾಡುಗಳು ಸೂಪರ್ ಹಿಟ್ ಆಗಿದ್ದು, ಬಾಕಿ ೨ ಹಾಡುಗಳು ಬಿಡುಗಡೆಯಾಗಲಿದೆ ಎಂದರು.
ಇನ್ನೂ ಚಿತ್ರಕ್ಕೆ ವೆಂಕಟರಮಣಫ್ಪ, ಶಶಿಕುಮಾರ್, ಮಣಿ, ವೆಂಕಟೇಶ ಚಿತ್ರದ ನಿರ್ಮಾಪಕರಾಗಿದ್ದು, ಸಹ ನಿರ್ಮಾಪಕ ಬಿ.ಟಿ.ಎನ್ . ರಾಮು, ಚಿತ್ರದ ನಿರ್ದೇಶನವನ್ನು ಅಜಿತರಾಯ್ ಮಾಡಿದ್ದಾರೆ. ಸಂಗೀತ ಸಂಯೋಜನೆಯನ್ನು ಪ್ರತೀಕ ಶೆಟ್ಟಿ ನೀಡಿದ್ದಾರೆ ಎಂದರು.
ಚಿತ್ರದ ನಾಯಕಿಯಾಗಿ ಹುಬ್ಬಳ್ಳಿಯ ಯುವ ನಟಿ ಆಹಾರಿಕಾ ನಾಯ್ಕ್, ವಿವೇಕ್, ಕಾಂತರಾಜ, ಹಂಸ, ಹರೀಶ್, ಪ್ರವೀಣ್ ಸೇರಿದಂತೆ ಹೊಸ ಕಲಾವಿದರು ಅಭಿನಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾಂತರಾಜ್, ನಿರ್ದೇಶಕ ಅಜಿತ್ ರಾಯ್, ರಿಯಾಜ್, ಸೇರಿದಂತೆ ಉಪಸ್ಥಿತರಿದ್ದರು.