ಹುಬ್ಬಳ್ಳಿ : ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್‌ನ ಯುವರಾಣಿ ಪ್ರಿಯಾಂಕ ಗಾಂಧಿ ಒಂದು ರೀತಿ ಹೇಳುತ್ತಾರೆ, ಜಮೀರ ಅಹ್ಮದ ಇನ್ನೊಂದು ರೀತಿ ಹೇಳುತ್ತಿದಾರೆ. ಈ ರೀತಿ ಏನೇನೊ ಹೇಳಿಕೆಗಳನ್ನು ನೀಡುವ ಮೂಲಕ ಮಕ್ಕಳಲ್ಲಿ ವಿಷಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ ಮಾಡುತ್ತಿದೆ. ಆದ್ದರಿಂದ ಕಾಂಗ್ರೆಸ್ ಹಿಜಾಬ್ ವಿಚಾರದಲ್ಲಿ ತನ್ನ ನಿಲುವು ಏನೂ ಎಂಬುವುದನ್ಮು ಸ್ಪಷ್ಟಪಡಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಗ್ರಹಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಾಬ್ ಗಲಾಟೆ ಆಗಲೇಬಾರದಿತ್ತು. ರಾಜ್ಯ ಹಾಗೂ ದೇಶದಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿದೆ. ಅದನ್ನು ಎಲ್ಲರೂ ಕೂಡಾ ಪಾಲನೆ ಮಾಡಬೇಕು. ದುರುದ್ದೇಶ ಪೂರ್ವಕವಾಗಿ ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ನನಗೆ ಅನಿಸುತ್ತಿದೆ. ಕಾಂಗ್ರೆಸನ ಯುವರಾಣಿ ಪ್ರಿಯಾಂಕ ಗಾಂಧಿಯವರು ಶಾಲೆಗೆ ಹೇಗೆ ಬೇಕಾದರೂ ಬರಬಹುದು ಎಂದು ಹೇಳಿದ್ದಾರೆ. ನಮ್ಮ ದೇಶಕ್ಕೆ ತನ್ನದೇ ಆದ ಸಂಸ್ಕೃತಿ ಇದೆ. ಹಾಗಾಗಿ ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಏನು ಎಂಬುದನ್ನು ಅವರ ಪಕ್ಷದ ನಾಯಕರು ತಿಳಿಸಬೇಕು ಎಂದು ಒತ್ತಾಯ ಮಾಡಿದರು.
*ಜಮೀರ ಒಬ್ಬರು ಶಾಸಕರಾಗಿ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ತಿಳಿದುಕೊಳ್ಳಲ್ಲಿ.*
ಜಮೀರ ಅಹ್ಮದ ಅವರ ಹಿಜಾಬ್ ಹಾಕಿದರೆ ರೇಪ್ ರೇಟ್ ಕಡಿಮೆ ಅಗುತ್ತೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಅತ್ಯಂತ ಕೀಳು ಮಟ್ಟದ ಹೇಳಿಕೆ. ಹಿಜಾಬ್ ಹಾಕದೇ ಇದ್ರೆ ಇವರು ಏನು ಮಾಡುತ್ತಾರೆ. ಒಬ್ಬ ಶಾಸಕರಾಗಿ ಹೇಗಿರಬೇಕು ಎಂಬುದನ್ನ ಜಮೀರ ತಿಳಿದುಕೊಳ್ಳಬೇಕಾಗಿದೆ. ವೋಟ್ ಬ್ಯಾಂಕ್ ಗಾಗಿ ಈ ರೀತಿ ಚಿಲ್ಲರೆ ಕೆಲಸವನ್ನ ಮಾಡುತ್ತಿದ್ದಾರೆ. ಅದನ್ನ ಕಾಂಗ್ರೆಸ್ ತಡೆಯಬೇಕಾಗಿದೆ. ಹಿಜಾಬ್ ಏಕೆ ಬೇಕು ವಸ್ತ್ರ ಸಂಹಿತೆ ಇರುವಾಗ ಹಿಜಾಬ್ ಅವಶ್ಯವಿಲ್ಲ ಎಂದು ಹೇಳಿದರು.
*ಹಿಜಾಬ್ ವಿಚಾರದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳನ್ನು ಬಲಿ ಪಶು ಮಾಡಲಾಗುತ್ತಿದೆ.*
ತ್ರಿವಳಿ ತಲಾಖ್ ಅತ್ಯಂತ ಕೆಟ್ಟ ವ್ಯವಸ್ಥೆ ಆಗಿತ್ತು. ಅದನ್ನ ನಾವು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ. ಮುಸ್ಲಿಂ ಹೆಣ್ಣು ಮಕ್ಕಳು ಕತ್ತಲೆಯಲ್ಲಿ ಇದ್ದರೂ ಅವರನ್ನ ಬೆಳಕಿಗೆ ತಂದಿದ್ದೇವೆ. ದೇಶದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳನ್ನು ಮುಂದಿಟ್ಟುಕೊಂಡು ಕೆಲವು ಸ್ವ ಹಿತಾಸಕ್ತಿಗಳು ಹಿಜಾಬ್ ವಿವಾದವನ್ನು ಹುಟ್ಟು ಹಾಕಿವೆ. ಹಾಗಾಗಿ ಮುಸ್ಲಿಂ ಹೆಣ್ಣು ಮಕ್ಕಳು ಹಾಗೂ ಅವರ ಪಾಲಕರು ತುಂಬಾ ಎಚ್ಚರಿಕೆಯಿಂದ ಇರಬೇಕು. ಮುಸ್ಲಿಂ ಸಮುದಾಯದ ಆಚರಣೆಗಳಿಗೆ ದೇಶದಲ್ಲಿ ಅವಕಾಶ ನೀಡಲಾಗಿದೆ. ಈಗ ಹಿಜಾಬ್ ವಿವಾದ ಮುಂದಿಟ್ಟುಕೊಂಡು ಮಕ್ಕಳನ್ನು ಬಲಿಪಶು ಮಾಡಿ ರಾಜಕೀಯ ಮಾಡುತ್ತಿದ್ದಾರೆ. ಆದ್ದರಿಂದ ಮುಸ್ಲಿಂ ಬಾಂಧವರು ಅದನ್ನ ಅರಿತು ಸರ್ಕಾರದ ಜೊತೆ ಸ್ಪಂದಿಸಿಬೇಕು. ಹೈ ಕೋರ್ಟ್ ಮಧ್ಯಂತರಬಾದೇಶ ಉಲ್ಲಂಘಿಸಿ ಯಾರಾದರೂ ಶಾಲಾ ಕಾಲೇಜುಗಳ ಮುಂದೆ ಗಲಾಟೆ ಇತ್ಯಾದಿ ಮಾಡಿದರೆ ಅದಕ್ಕೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಯಾವುದೇ ಕಾರಣಕ್ಕೂ ಸುಮ್ಮನೆ ಇರುವುದಕ್ಕೆ ಬರುವುದಿಲ್ಲ. ಯೋಚನೆಮಾಡಿ ಎಲ್ಲರೂ ವರ್ತನೆ ಮಾಡಬೇಕು ಎಂದು ತಿಳಿಸಿದರು.