Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಕೇಂದ್ರ ಬಜೆಟ್ ಸ್ವಾಗತಾರ್ಹ, ರಾಜ್ಯ ಬಜೆಟ್ ಬಗ್ಗೆ ಸಚಿವ ಮುನೇನಕೊಪ್ಪ ವಿಶ್ವಾಸ

ಕೇಂದ್ರ ಬಜೆಟ್ ಸ್ವಾಗತಾರ್ಹ, ರಾಜ್ಯ ಬಜೆಟ್ ಬಗ್ಗೆ ಸಚಿವ ಮುನೇನಕೊಪ್ಪ ವಿಶ್ವಾಸ

Spread the love

ಹುಬ್ಬಳ್ಳಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, ರಾಜ್ಯದ ಬಜೆಟ್ ಕೂಡ ಜನರಿಗೆ ವರವಾಗಲಿದೆ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮ ಪಕ್ಷದ ಸೂಚನೆ ಪ್ರಕಾರ ಎಲ್ಲಾ ಜಿಲ್ಲೆಗಳಲ್ಲಿ ಬಜೆಟ್ ಕುರಿತು ಸುದ್ದಿಗೋಷ್ಠಿ ಮಾಡುತ್ತಿದ್ದೇವೆ. ಕೋವಿಡ್ ಸಂಕಷ್ಟದಲ್ಲೂ ಸಹ ಆಹಾರದ ಕೊರತೆ ಆದಾಗಲು ದೇಶ ಮುನ್ನಡೆದಿದೆ.
ಲಸಿಕೆಯನ್ನು ಕಂಡುಹಿಡಿದು ದೇಶಕ್ಕೆ ಸಮರ್ಪಣೆ ಮಾಡಲಾಗಿದೆ. ನಿರ್ಮಲಾ ಸೀತಾರಾಮನ್ ಸಹ ನಮಗೆ ಸಹಕಾರ ಕೊಟ್ಟಿದ್ದಾರೆ. ಕೇಂದ್ರದ ಬಜೆಟ್ ನಂತರ ರಾಜ್ಯದ ಎಲ್ಲರೂ ಸೇರಿ ರಾಜ್ಯ ಬಜೆಟ್ ಬಗ್ಗೆ ಚರ್ಚಿಸಲಾಗಿದೆ ಎಂದರು.

ಕೇಂದ್ರದ ಬಜೆಟ್ ನಿಂದ ಎಲ್ಲಾ ರಂಗದಲ್ಲೂ ಸಹ ಆದ್ಯತೆ ಸಿಕ್ಕಿದೆ. ರಾಜ್ಯದ ಬಜೆಟ್ ಸಹ ಬಹಳ ಉತ್ತಮವಾಗಿರುತ್ತೆ. ಈ ನಿಟ್ಟಿನಲ್ಲಿ ಸಿಎಂ ಎಲ್ಲ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಮಹಿಳೆಯರೇ ಹೆಚ್ಚಾಗಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಗಾರ್ಮೆಂಟ್ಸ್ ಗಳು ಆಗುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ಮಹಿಳೆಯರಿಗೆ ವಿಶೇಷ ತರಬೇತಿ ನೀಡಿ ಅವರಿಗೆ ಉದ್ಯೋಗ ನೀಡುವ ಕಾರ್ಯ ಮಾಡಲಾಗುತ್ತದೆ. ಕರ್ನಾಟದಲ್ಲಿ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಮಾಡುವ ಬಗ್ಗೆ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದ್ದೇನೆ. ಮೈಸೂರಿನಲ್ಲಿ ಸಿಲ್ಕ್ ಪಾರ್ಕ್ ಮಾಡೋದಿದೆ ಎಂದು ಅವರು ಹೇಳಿದರು.

About Santosh Naregal

Check Also

ಡಾ.ರಾಜಕುಮಾರ್ ಅಭಿಮಾನಿಗಳಿಂದ ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು

Spread the loveಸಂತೋಷ, ಸಮೃದ್ಧ ಮತ್ತು ಸದಾ ನೆನಪಿನಲ್ಲಿ ಉಳಿಯುವ ದೀಪಾವಳಿ ನಿಮ್ಮದಾಗಲಿ, ದೀಪಾವಳಿಯ ಬೆಳಕಿನಂತೆ ನಿಮ್ಮ ಜೀವನದಲ್ಲೂ ಬೆಳಕು …

Leave a Reply

Your email address will not be published. Required fields are marked *

[the_ad id="389"]