ಮಗಳ ಮೇಲೆ ತಂದೆಯೊಬ್ಬನಿರಂತರ ಅತ್ಯಾಚಾರ ನಡೆಸಿದ್ದು , ಕೊನೆಗೆ ತಾಯಿಯ ಉಪಾಯದಿಂದ ಪೊಲೀಸರ ಅತಿಥಿಯಾಗಿದ್ದಾನೆ.ಶಿವಮೊಗ್ಗದ ಗೋವಿಂದಪುರದಲ್ಲಿ ಈ ಘಟನೆ ನಡೆದಿದೆ . ಮೂಲತಃ ಇವರು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನವರು ಎಂದು ತಿಳಿದುಬಂದಿದೆ . ಈತನಿಗೆ ಮಗಳು ಸೇರಿದಂತೆ ಇಬ್ಬರು ಗಂಡು ಮಕ್ಕಳಿದ್ದಾರೆ . ತನ್ನ ತಂದೆಯ ದುಷ್ಕೃತ್ಯವನ್ನು ತಾಯಿಯ ಹತ್ತಿರವೂ ಹೇಳದೆ ಸಹಿಸಿಕೊಂಡಿದ್ದಾಳೆ . ವಿಷಯ ತಿಳಿದ ಬಾಲಕಿಯ ತಾಯಿ ತನ್ನ ಮಗಳಿಗೆ ಮದುವೆ ಮಾಡುವ ಯೋಚನೆ ಮಾಡುತ್ತಾಳೆ . ಓರ್ವ ಹುಡುಗನನ್ನು ಹುಡುಕಿ ಕಳೆದ 15 ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿದ್ದಾರೆ . ತಂದೆ ಮಗಳಿಗೆ ಮದುವೆ ಆಗದಂತೆ ಬೆದರಿಕೆ ಹಾಕಿದ್ದಾನೆ . ಇದರಿಂದ ಬೇರೆ ದಾರಿ ಕಾಣದೇ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆಗೆ ನಿರ್ಧರಿಸುತ್ತಾಳೆ . ಅದರಂತೆ ಬಾಲಕಿಯ ತಾಯಿ ಗೋವಿಂದಪುರದಲ್ಲಿದ್ದ ತನ್ನ ಅಕ್ಕನಿಗೆ ಫೋನ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದ ವಿಚಾರ ತಿಳಿಸುತ್ತಾಳೆ . ಆಗ ಅವರು ಆತ್ಮಹತ್ಯೆ ನಿರ್ಧಾರ ಬಿಟ್ಟು ಗೋವಿಂದಪುರಕ್ಕೆ ಬರುವಂತೆ ತಿಳಿಸಿ . ಬಳಿಕ ಶಿವಮೊಗ್ಗದ ಮಹಿಳಾ ಪೊಲೀಸರಿಗೆ ತಿಳಿಸಿ ಆರೋಪಿಯನ್ನು ಬಂಧಿಸಿದ್ದಾರೆ .
