ಹುಬ್ಬಳ್ಳಿ : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿ ಧಾರವಾಡ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ೧೯೧ ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಹಾಗೂ ಶೌರ್ಯ ಪ್ರಶಸ್ತಿ ವಿತರಣೆ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ನಾಳೆ ಸಂಜೆ ೫ ಗಂಟೆಗೆ ನಗರದ ಕಿತ್ತೂರ ಚೆನ್ನಮ್ಮ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿವಾನಂದ ಮುತ್ತಣ್ಣವರ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳಿನ ಕಾರ್ಯಕ್ರಮದ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಧಾರವಾಡ ಮನಸೂರು ಮಠದ ಶ್ರೀ ರೇವಣಸಿದ್ದೇಶ್ವರ ಮಹಾ ಸಂಸ್ಥಾನ ಪೀಠದ ಬಸವರಾಜ ದೇವರು, ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ,, ಶಾಸಕರಾದ ಜಗದೀಶ್ ಶೆಟ್ಟರ್ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಚಿವರಾದ ಶಂಕರಪಾಟೀಲ್ ಮುನೇನಕೊಪ್ಪ, ಶಾಸಕರಾದ ಕುಸುಮಾವತಿ ಶಿವಳ್ಳಿ, ಅರವಿಂದ್ ಬೆಲ್ಲದ್, ಪ್ರಸಾದ ಅಬ್ಬಯ್ಯ, ಅಧ್ಯಕ್ಷತೆಯನ್ನು ಕುರುವ ಸಮಾಜದ ಮುಖಂಡ ಹೆಚ್
ಎಫ್. ಮುದಕಣ್ಣವರ, ಕಾರ್ಯಕ್ರಮ ನೇತೃತ್ವವನ್ನು ನೇತೃತ್ವವನ್ನು ಶಿವಾನಂದ ಜೋಗಿನ, ಮುಖ್ಯ ಅತಿಥಿಗಳಾಗಿ ಮಹೇಶ ಟೆಂಗಿನಕಾಯಿ, ನಾಗೇಶ ಕಲಬುರ್ಗಿ, ಅನಿಲಕುಮಾರ್ ಪಾಟೀಲ್, ಬಸವರಾಜ ಮಲಕಾರಿ, ಅಲ್ತಾಪ್ ಹಳ್ಳೂರ, ಸಂಜಯ ಕಪಟಕರ, ಮಲ್ಲಿಕಾರ್ಜುನ ಸಾವುಕಾರ, ಸಂಕಲ್ಪ ಶೆಟ್ಟರ್, ನಿರಂಜನ ಹಿರೇಮಠ, ಪೊಲೀಸ್ ಅಧಿಕಾರಿಗಳಾದ ವಿನೋದ್ ಮುಕ್ತೆದಾರ, ರವಿಚಂದ್ರ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ನಾಳಿನ ಕಾರ್ಯಕ್ರಮದಲ್ಲಿ ಗೋಪನಕೊಪ್ಪದ ದಾನಿಗಳು ಮನಸೂರು ಮಠಕ್ಕೆ ಅಡುಗೆ ಪಾತ್ರೆಗಳನ್ನು ಕೊಡಲಿದ್ದು, ಅವರಿಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದ ಅವರು ಸಮಾಜಮುಖಿ ಕಾರ್ಯನಿರ್ವಹಿಸಿದ ಪುನೀತ್ ರಾಜ್‍ಕುಮಾರ್ ಅವರ ಸ್ಮರಣಾರ್ಥವಾಗಿ ನಾಳಿನ ಕಾರ್ಯಕ್ರಮಕ್ಕೆ ಅಪ್ಪು ವೇದಿಕೆ ಎಂದು ಹೆಸರಿಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಚ್.ಎಫ್.ಮುದಕ್ಕನವರ, ಶಿವಾನಂದ ಜೋಗಿನವರ, ಸಿದ್ದಣ್ಣ ಜಟ್ಟೇಪ್ಪನವರ, ರಾಘವೇಂದ್ರ ಕುರಿ, ಮಲ್ಲಿಕಾರ್ಜುನ, ಬಾಳಮ್ಮ ಉಪಸ್ಥಿತರಿದ್ದರು.