ಹುಬ್ಬಳ್ಳಿ : ಕೋವಿಡ್ ನಿಯಂತ್ರಣಕ್ಕೆ ಹೆಚ್ಚು ಹೆಚ್ಚು ಜನರು ತಪಾಸಣೆಗೆ ಒಳಪಡುವುದು ಅಗತ್ಯವಾಗಿದೆ. ತಪಾಸಣೆ ಮಾಡಿಸಿಕೊಂಡ ವ್ಯಕ್ತಿಗಳು ವರದಿಗಳನ್ನು ಆನ್ ಲೈನ್ ಮೂಲಕ ಪಡೆಯುವ ವಿಧಾನಗಳನ್ನು ಐಸಿಎಂಆರ್ ಹಾಗೂ ಕನಾ೯ಟಕ ಸ್ಟೇಟ್ ಕೋವಿಡ್ ಪೋರ್ಟಲ್‌ಗಳು ಸರಳಿಕರಿಸಿವೆ. ಜಿಲ್ಲೆಯ ಜನ ಈ ವಿಧಾನಗಳ ಮೂಲಕ ತಮ್ಮ ತಪಾಸಣಾ ವರದಿಗಳನ್ನು ಪಡೆಯಲು ಜಿಲ್ಲಾಧಿಕಾರಿ ನಿತೇಶ ಕೆ ಪಾಟೀಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್ 19 ಆರ್‌ಟಿ ಪಿಸಿಆರ್ ಹಾಗೂ ರಾಪಿಡ್ ಆಂಟಿಜೆನ್ ಟೆಸ್ಟ್ ವರದಿಗಳಿಗಾಗಿ report.icmr.org.in ವೆಬ್ ಸೈಟ್ ಗೆ ಅಂತರ್ಜಾಲದ ಮೂಲಕ ಭೇಟಿ ನೀಡಬೇಕು . ಕೋವಿಡ್ 19 report portal ನಲ್ಲಿ ನೋಂದಾಯಿತ ಮೊಬೈಲ್ ನಂಬರ್ ದಾಖಲಿಸಬೇಕು. ಕೆಲವೇ ಸೆಕೆಂಡುಗಳಲ್ಲಿ ಮೊಬೈಲ್ ಗೆ ಒಟಿಪಿ ಬರುತ್ತದೆ. ಒಟಿಪಿ ದಾಖಲಿಸಿದ ನಂತರ verify & proceed ಲಿಂಕ್ ಕ್ಲಿಕ್ ಮಾಡಿದ ಕೂಡಲೇ ನಮೂದಿಸಿದ ಮೊಬೈಲ್ ಸಂಖ್ಯೆಯ ಮೂಲಕ ಪರೀಕ್ಷೆಗೊಳಪಟ್ಟ ಎಲ್ಲಾ ವ್ಯಕ್ತಿಗಳ ವಿವರ, ಕೋವಿಡ್ ತಪಾಸಣೆಗೆ ಸ್ವ್ಯಾಬ್ ಸಂಗ್ರಹಿಸಿದ ದಿನಾಂಕ, ಪರೀಕ್ಷೆ ದಿನಾಂಕ, ಪರಿಣಾಮ ಎಲ್ಲಾ ಮಾಹಿತಿ ಸಿಗುತ್ತವೆ. Action ಲಿಂಕ್ ಬಳಸಿ ಸುಲಭವಾಗಿ ವರದಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಕರ್ನಾಟಕ ರಾಜ್ಯ ಕೋವಿಡ್ ವಾರ್ ರೂಮಿನ covid.karanataka.gov.in ವೆಬ್‌ಸೈಟ್ ಮೂಲಕವು ಕೋವಿಡ್ ತಪಾಸಣಾ ವರದಿಗಳನ್ನು ಪಡೆಯಬಹುದು. ನೋಂದಾಯಿತ ಮೊಬೈಲ್ ನಂಬರ್ 13 ಅಂಕಿಗಳ ಎಸ್ಆರ್‌ಎಫ್ ಗುರುತು ಹಾಗೂ ಪರದೆಯಲ್ಲಿ ಕಾಣುವ ಕ್ಯಾಪ್ಚಾವನ್ನು ಸರಿಯಾಗಿ ದಾಖಲಿಸಿ ಕೋವಿಡ್ ತಪಾಸಣಾ ವರದಿಗಳನ್ನು ಜನರು ಪಡೆಯಬಹುದು.
ಕೋವಿಡ್ ತಡೆಯಲು, ನಿಯಂತ್ರಿಸಲು ಪರೀಕ್ಷೆಗೆ ಒಳಪಡುವುದು ಅಗತ್ಯ. ಜಿಲ್ಲೆಯ ಜನ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.