ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಹುದ್ದೆಯಿಂದ ಡಾ. ಸುರೇಶ ಇಟ್ನಾಳ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ನೂತನ ಆಯುಕ್ತರನ್ನಾಗಿ ಐಎಎಸ್ ಅಧಿಕಾರಿ ಡಾ.ಬಿ.ಗೋಪಾಲಕೃಷ್ಣ ಅವರನ್ನು ನಿಯೋಜನೆ ಮಾಡಲಾಗಿದೆ.
ಹೌದು.. ಧಾರವಾಡದ ಹಿರಿಯ ಉಪವಿಭಾಗಾಧಿಕಾರಿ ಹುದ್ದೆಯಿಂದ ಎರಡು ದಿನದ ಹಿಂದಷ್ಟೆ ವರ್ಗಾವಣೆಯಾಗಿರುವ ಐಎಎಸ್ ಅಧಿಕಾರಿ ಡಾ. ಬಿ. ಗೋಪಾಲಕೃಷ್ಣ ಅವರನ್ನು ಪಾಲಿಕೆ ಆಯುಕ್ತ ಹುದ್ದೆಗೆ ನಿಯೋಜನೆಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ವಿಭಾಗದ ಸರ್ಕಾರದ ಅಧೀನ ಕಾರ್ಯದರ್ಶಿ ಸಂಜಯ ಬಿ.ಎಸ್. ಆದೇಶ ಮಾಡಿದ್ದಾರೆ.
Hubli News Latest Kannada News