ಹುಬ್ಬಳ್ಳಿ : ಹುಬ್ಬಳ್ಳಿ ಜನತಾ ಬಜಾರ್ ಮಾರುಕಟ್ಟೆಯಲ್ಲಿ ಅಜ್ಜಿಗೆ ವ್ಯಾಕ್ಸಿನ ಹಾಕಲು ಆರೋಗ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟು ವ್ಯಾಕ್ಸಿನ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು ಧಾರವಾಡ ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್ ಎಲ್ಲರೂ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಹುಬ್ಬಳ್ಳಿಯ ಜನತಾ ಬಜಾರ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಮಾಡುವವರ ಬಳಿ ತೆರಳಿ ವ್ಯಾಕ್ಸಿನ ನೀಡಲಾಗುತ್ತಿದೆ.ಬೀದಿ ಬದಿ ತರಕಾರಿ ಮಾರಾಟ ಮಾಡುವ ಅಜ್ಜಿ ವ್ಯಾಕ್ಸಿನ್ ಪಡೆದುಕೊಳ್ಳಲು ಹಿಂದೆಟು ಹಾಕುತ್ತಿದ್ದಳು . ಅಕ್ಕ ಪಕ್ಕದ ವ್ಯಾಪಾರಸ್ಥರು ಸೇರಿಕೊಂಡು ಅಜ್ಜಿಗೆ ವ್ಯಾಕ್ಸಿನ ನಿಡಿದ್ದಾರೆ . ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಸ್ಪತ್ರೆ ಸಿಬ್ಬಂದಿ ಅಜ್ಜಿಯ ಗೆ ವ್ಯಾಕ್ಸಿನ ನಿಡಿದ್ದಾರೆ . ಸದ್ಯ ಈ ವಿಡಿಯೋ ಎಲ್ಲೆಡೆ ಇದೀಗ ವೈರಲ್ ಆಗಿದೆ
Hubli News Latest Kannada News