ಧಾರವಾಡ : ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮವೊಂದಕ್ಕೆ ಪಂಜಾಬ್ ತೆರಳಿದ ಸಂದರ್ಭದಲ್ಲಿ ಅವರಿಗೆ ಅಪಮಾನ ಮಾಡುವ ಮೂಲಕ, ಕಾಂಗ್ರೆಸ್ ಕೀಳು ಮಟ್ಟದ ರಾಜಕೀಯ ತೋರಿದೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಕಾಂಗ್ರೆಸ ವಿರುದ್ದ ಕಿಡಿಕಾರಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸವನ್ನ ಇಂದು ಪಂಜಾಬ್ ಕಾಂಗ್ರೆಸ್ ಸರ್ಕಾರ ಮಾಡಿದೆ. ನಮ್ಮ ದೇಶದಲ್ಲಿ ತುರ್ತು ಪರಿಸ್ಥಿತಿ ಬಳುವಳಿ ನೀಡಿದ ಪಕ್ಷದಿಂದ ನಾವು, ಇನೇನೂ ನಿರೀಕ್ಷೆ ಮಾಡಲು ಸಾಧ್ಯ. ಅಂತಹ ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಬೇರೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಪ್ರಧಾನಿಗೆ ರಸ್ತೆ ಮೇಲೆ ನಿಲ್ಲುವಂತೆ ಮಾಡಿದ್ದು ಗಣಘೋರ ಅಪರಾಧವಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಂಥ ಕೆಟ್ಟ ಕೆಲಸ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ರಾಜಕೀಯ ಮಾಡಬೇಕು ಆದರೆ ಇಂತಹ ಕಿಳಮಟ್ಟದ ರಾಜಕಾರಣ ಮಾಡಬಾರದು. ಇದನ್ನ ಪ್ರತಿಯೊಬ್ಬ ನಾಗರಿಕನು ಖಂಡಿಸುತ್ತಾನೆ ಎಂದು ವಾಗ್ದಾಳಿ ನಡೆಸಿದರು.
*ಕಾರ್ಯಕಾರಣಿಯಲ್ಲಿ ನನಗೆ ಸಚಿವ ಸ್ಥಾನ ನೀಡುವ ಕುರಿತು ಯಾವುದೇ ಚರ್ಚೆ ನಡೆದಿಲ್ಲ.*
ಇದೆ ವೇಳೆ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದು ತಪ್ಪು ಸುದ್ದಿಯಾಗಿದೆ. ಅಂತಹ ಯಾವುದೇ ಸುದ್ದಿ ಇಲ್ಲ. ಹುಬ್ಬಳ್ಳಿ ಕಾರ್ಯಕಾರಣಿ ಸಭೆ ವೇಳೆ ಆರೋಗ್ಯ ಸಮಸ್ಯೆ ಆಗಿತ್ತು. ಹೀಗಾಗಿ ನಾನು ಉದ್ಘಾಟನೆಗೆ ಮಾತ್ರ ಬಂದು ಹೋಗಿದ್ದೇನೆ. ಅಷ್ಟೇ ಅಲ್ಲದೆ ಸಚಿವ ಸ್ಥಾನದ ಬಗ್ಗೆ ಕಾರ್ಯಕಾರಿಣಿಯಲ್ಲಿ ಯಾವುದೇ ಚರ್ಚೆ ಆಗಿಲ್ಲ. ಆದರೆ ಹಿರಿಯರು ಆರೋಗ್ಯ ಸಮಸ್ಯೆ ಕುರಿತು ವಿಚಾರಿಸಿ ರೆಸ್ಟ್ ಮಾಡುವಂತೆ ಸಲಹೆ ಕೊಟ್ಟಿದ್ದರು. ಹೀಗಾಗಿ ಆಗ ನಾನು ಮನೆಯಲ್ಲಿ ರೆಸ್ಟ್ ಮಾಡಿದೆ ಎಂದು ತಿಳಿಸಿದರು.