ಹುಬ್ಬಳ್ಳಿ: ರಾಮನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದ ಘಟನೆಯನ್ನು ವಿರೋಧಿಸಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು. ಘೋಷಣೆ ಯಾರು ಕೂಗ್ತಿದ್ದೀರಾ ಆ ಗಂಡಸು ಬನ್ನಿ ಎಂದು ಅಶ್ವಥ್ ನಾರಾಯಣ್ ಕರೆದಿದ್ದರೆ, ಅವರು ಯಾರ ಹೆಸರನ್ನೂ ಹೇಳಿಲ್ಲ. ಯಾವುದೇ ರೌಡಿಸಂ ನಡೆಯುವುದಿಲ್ಲ, ಡಿಕೆ ಸುರೇಶ್ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದ ಕಾರ್ಯಕ್ರಮದಲ್ಲಿ ಡಿಕೆ ಡಿಕೆ ಎಂದು ಕೂಗಿದರೆ ಇದು ಪೂರ್ವನಿಯೋಜಿತ ಅಲ್ಲವೇ? ಕೂಡಲೇ ಡಿ.ಕೆ. ಸುರೇಶ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಇನ್ನು ಬಿಜೆಪಿ ಕಾರ್ಯಕರ್ತರು ಡಿಕೆ ಸುರೇಶ್ ಫೋಟೋಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ಡಿಕೆ ಬ್ರದರ್ಸ್ ಕಳ್ಳರು, ಗೂಂಡಾಗಳು ಎಂದು ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಧಾರವಾಡ ವಿಭಾಗ ಫ್ರಭಾರಿ ಲಿಂಗರಾಜ ಪಾಟೀಲ್, ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಿಗಿ, ಮಲ್ಲಿಕಾರ್ಜುನ ಸಾಹುಕಾರ್, ಸಂತೋಷ ಚವ್ಹಾನ್, ಪ್ರಭು ನವಲಗುಂದಮಠ, ಜಿಲ್ಲಾ ವಕ್ತಾರರಾದ ರವಿ ನಾಯಕ, ಚಂದ್ರಶೇಖರ ಗೋಕಾಕ್, ರಂಗಾ ಬದ್ದಿ, ಸಿದ್ದು ಮೊಗಲಿಶೆಟ್ಟರ್, ಬಸವರಾಜ ಅಮ್ಮಿನಬಾವಿ, ವಿರೂಪಾಕ್ಷಿ ರಾಯನಗೌಡ್ರ, ಗೋಪಾಲ ಬದ್ದಿ, ಜಗದೀಶ್ ಬುಳ್ಳಾನವರ, ಶಿವಾನಂದ ಮುತ್ತಣ್ಣವರ, ಅವಿನಾಶ್ ಹರಿವಾಣ, ಸುಭಾಷ್ ಅಂಕಲಕೋಟೆ, ರೂಪಾ ಶೆಟ್ಟಿ , ಉಮಾ ಮುಕಂದ, ಅಕ್ಕಮಹಾದೇವಿ ಹೆಗಡೆ, ಸಂಗೀತಾ ಇಜಾರದ ಸೇರಿದಂತೆ ಮುಂತಾದವರು ಇದ್ದರು.