ಹುಬ್ಬಳ್ಳಿ: ಕೆನರಾ ಬ್ಯಾಂಕ್ ವೃತ್ತ ಕಚೇರಿ ಹುಬ್ಬಳ್ಳಿ ವತಿಯಿಂದ ಮೆಗಾ ರೀಟೇಲ್ ಲೋನ್ ಎಕ್ಸಪೋ ಗೋಕುಲ ರಸ್ತೆಯ ಬಿಗ್ ಬಜಾರ ಹತ್ತಿರದ ಸೆಂಟ್ರಮ್ ಬಿಲ್ಡಿಂಗ್ ಆವರಣದಲ್ಲಿ ನಡೆಯಿತು.
ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ವೃತ್ತ ಕಚೇರಿ ಹುಬ್ಬಳ್ಳಿಯ ಜನರಲ್ ಮ್ಯಾನೇಜರ್ ಜಿ.ಎಸ್.ರವಿಸುಧಾಕರ, ಕೊರೋನಾ ಸೋಂಕು ಕಡಿಮೆಯಾಗುತ್ತಿದ್ದು, ವ್ಯಾಪಾರ ವಹಿವಾಟು ಚೇತರಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಜನರಿಗೆ ನೆರವಾಗುವ ದೃಷ್ಟಿಯಿಂದ ಕೆನರಾ ಬ್ಯಾಂಕ್ ಮೆಗಾ ರಿಟೇಲ್ ಲೋನ್ ಎಕ್ಸಪೋ ಹಮ್ಮಿಕೊಂಡಿದ್ದು, ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕು. ರಾಷ್ಟ್ರದ ಅತಿ ದೊಡ್ಡ ಮೂರನೇ ಕೆನರಾ ಬ್ಯಾಂಕ್ ಆಗಿದ್ದು, ಗ್ರಾಹಕರಿಗೆ ಅತಿ ಕಡಿಮೆ ಬಡ್ಡಿದರಗಳಲ್ಲಿ ಗೃಹ ಸಾಲ, ವಾಹನ ಸಾಲ, ಶೈಕ್ಷಣಿಕ ಸಾಲ ಮತ್ತು ಇತರೆ ವೈಯಕ್ತಿಕ ಸಾಲ ನೀಡುತ್ತಿದೆ. ಗೃಹ ಸಾಲಕ್ಕೆ ಅತಿ ಕಡಿಮೆ ಅಂದರೆ ಶೆ.6.09 ಬಡ್ಡಿದರ ಮತ್ತು ಕಾರ ಸಾಲಕ್ಕೆ ಶೇ.7.03 ಬಡ್ಡಿದರ ಇರಲಿದೆ. ಅಲ್ಲದೇ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಸುಮಾರು ರೂ 2.68 ಲಕ್ಷ ವರೆಗೆ ಸಹಾಯಧನ ದೊರೆಯಲಿದೆ. ಮನೆ ಖರೀದಿ, ಸೈಟ್ ಖರೀದಿ ಮತ್ತು ಕಟ್ಟಡ ನಿರ್ಮಾಣ ಈಗಾಗಲೇ ಬೇರೆ ಬ್ಯಾಂಕ್ ನಲ್ಲಿ ಇರುವ ಗೃಹಸಾಲ ಇತ್ಯಾದಿ ಸೌಲಭ್ಯಗಳನ್ನು ಈ ಸಂದರ್ಭದಲ್ಲಿ ಒದಗಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಹಕರಿಗೆ ಸಾಲ ಮಂಜೂರಾತಿ ಪತ್ರ ವಿವರಿಸಿದರು. ಎಕ್ಸಪೋದಲ್ಲಿ ಪ್ರಮುಖ ಬಿಲ್ಡರ್ ಗಳು, ಕಾರು ಮಾರಾಟ ಡೀಲರ್ ಗಳು ಭಾಗವಹಿಸಿದ್ದವು, ಗ್ರಾಹಕರು ಕಾರು, ಗೃಹ ಸಾಲ ಪಡೆಯಲು ನೂರಾರು ಗ್ರಾಹಕರು ಮುಗಿಬಿದ್ದಿರು. ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಬಿ.ರೇಣುಕಾ, ಕೆ.ಎನ್.ಕುಲಕರ್ಣಿ ಸೇರಿದಂತೆ ಬ್ಯಾಂಕ್ ನ ಇತರ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಇದ್ದರು. ಗೋನು ತಿವಾರಿ ಕಾರ್ಯಕ್ರಮದ ನಿರೂಪಣೆ ಮಾಡಿದರು.