ಹುಬ್ಬಳ್ಳಿ : ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ, ನಮ್ಮ ನಿಲುವು ಸ್ಪಷ್ಟವಾಗಿದೆ. ಮೇಲ್ಮನೆಯಲ್ಲಿ ನಮಗೆ ಸಪೋರ್ಟ್ ಇಲ್ಲ, ಅಲ್ಲಿ ನಮ್ಮವರು ಇರಲಿಲ್ಲ, ಅವರು ಬಂದಿದ್ದರೆ ನಾವು ಅವರ ಸಪೋರ್ಟ್ ಮಾಡಿ ಎಂದು ಕೇಳುತ್ತಿದ್ದೆವು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಪತಿ ಅನ್ನೋದನ್ನ ಮರೆತು ಕಾಂಗ್ರೆಸ್ ನವರು ಮಾತಾಡಿದ್ದಾರೆ. ಅವರಿಗೆ ಮನಸಿಗೆ ನೋವಾಗಿ ರಾಜಿನಾಮೆ ಸಹ ನೀಡಲು ಮುಂದಾಗಿದ್ದರು.
ನಾನೇ ಅವರಿಗೆ ಕರೆ ಮಾಡಿ ಆ ರೀತಿ ನಿರ್ಧಾರ ಮಾಡಬೇಡಿ ಎಂದು ಕೇಳಿಕೊಂಡೆ, ನಂತರ ಅವರನ್ನ ಮನವೊಲಿಸಿದ್ದೇವೆ ಎಂದರು.
ವಿದೇಶದಲ್ಲಿ ಶಸ್ತ್ರ ಚಿಕಿತ್ಸೆ ವಿಚಾರದಲ್ಲಿ, ಡಾವೋಸ್ ಶೃಂಗ ಸಭೆಯೇ ಮುಂದೆ ಹೋಗಿದೆ.
ಯಾವುದೇ ಕಾರಣಕ್ಕೂ ಮುಂದೆಯೂ ನಾನು ಪ್ರವಾಸಕ್ಕೆ ಹೋಗುವುದಿಲ್ಲ, ವಿದೇಶದಲ್ಲಿ ಚಿಕಿತ್ಸೆ ಬಗ್ಗೆ ಸ್ಪಷ್ಠಿಕರಣ ಕೊಟ್ಟಿದ್ದಾರೆ ಸಿಎಂ,
ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ, ಬೆಂಗಳೂರಿಗೆ ಹೋಗಿ ತಜ್ಞರ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವುದು ಎಂದರು.