ಹುಬ್ಬಳ್ಳಿ : ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ವತಿಯಿಂದ ಧಾರವಾಡದ ನವಲೂರಿನಲ್ಲಿರುವ ಆದಿತ್ಯ ಮಯೂರ ರೆಸಾರ್ಟ್ ನಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ವತಿಯಿಂದ ೨೦೨೦-೨೧ ನೇ ಸಾಲಿನ ಎಸ್.ಎಸ್.ಎಲ್. ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ೮೦% ಮತ್ತು ೮೦% ಕ್ಕಿಂತ ಅಧಿಕ ಅಂಕ ಪಡೆದು ತೇರ್ಗಡೆಯಾದ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ಕೋಶಾಧ್ಯಕ್ಷರಾದ ಸುಧೀರ್ ಉಪ್ಪಾರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇದೇ ದಿನಾಂಕ ೨೬ ರಂದು ಬೆಳಗ್ಗೆ ೧೦ ಗಂಟೆಯಿಂದ ೫ ಗಂಟೆಯವರೆಗೆ ಹಮ್ಮಿಕೊಳ್ಳಳಾಗಿದ್ದು, ರಾಜ್ಯದ ಸಮಸ್ತ ಉಪ್ಪಾರ ಬಾಂಧವರು ಕಾರ್ಯಕ್ರಮಕ್ಕೆ ಪಾಲ್ಗೊಳ್ಳಬೇಕೇಂದರು.
ಈಗಾಗಲೇ ಉಪ್ಪಾರ ಸಮಾಜದ ೨೨ ಮಕ್ಕಳಿಗೆ ದತ್ತು ಪಡೆಯಲಾಗಿದ್ದು, ದಾನಿಗಳಿಂದ ಸಮಾಜದ ವತಿಯಿಂದ ವಿದ್ಯಾಭ್ಯಾಸ ನೋಡಿಕೊಳ್ಳಲಾಗುತ್ತಿದೆ ಎಂದರು.
ಅಂದಿನ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಗದೀಶ ಶೆಟ್ಟರ್, ಗೃಹ ಸಚಿವ ಅರಗ ಜ್ಞಾನೇಂದ್ರ, ಶಾಸಕ ಅರವಿಂದ್ ಬೆಲ್ಲದ್, ಮಾಜಿ ಶಾಸಕ ಪುಟ್ಟರಂಗಶೆಟ್ಟಿ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ವಿಷ್ಣು ಲಾತೂರ,
೯೪೪೮೨೨೫೦೪೬, ಸುಧೀರ ಉಪ್ಪಾರ ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಉಪಾಧ್ಯಕ್ಷರು ಈಶ್ವರಪ್ಪ ಗುರಪ್ಪ ಶಿರಕೋಳ ಉಪಸ್ಥಿತರಿದ್ದರು.