ಹುಬ್ಬಳ್ಳಿ : ಪುನೀತ್ ರಾಜ್ ಕುಮಾರ್ ಅವರ ನೇತ್ರ ನಾಲ್ಕು ಜನರಿಗೆ ಬೆಳಕು ನೀಡಿದೆ ಹಾಗೆ ನನ್ನ ನೇತ್ರವು ನಾಲ್ವರಗೆ ಬೆಳಕು ನೀಡುವ ಉದ್ದೇಶದಿಂದ ನಾನು ನೇತ್ರದಾನಕ್ಕೆ ನೊಂದಣಿ ಮಾಡಿದ್ದೇನೆ ಎಂದು ಹರೀಶ್ ಎಸ್ ಬೊಮ್ಮನಹಳ್ಳಿ ಹೇಳಿದರು
ನಟ ಪುನೀತ್ ರಾಜಕುಮಾರ ಅವರ ಸ್ಮರಣಾರ್ಥವಾಗಿ
ಸುಮಧುರ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ನೇತ್ರದಾನ ಕಾರ್ಯಕ್ರಮದಲ್ಲಿ ಹರೀಶ್ ಎಸ್ ಬೊಮ್ಮನಹಳ್ಳಿ ಅವರು ನೇತ್ರದಾನಕ್ಕೆ ನೊಂದಣಿ ಮಾಡಿದರು. ನಂತರ ಮಾತನಾಡಿದ ಅವರು ನಾನು ನನ್ನ ಸ್ವಇಚ್ಛೆ ಇಂದ ನೇತ್ರದಾನ್ ಮಾಡಲು ಇಚ್ಚೆಸಿದ್ದೇನೆ ನಮ್ಮ ದೇಶದ ಮಕ್ಕಳಿಗೆ ಹೋರ್ ದೇಶದಿಂದ ನೇತ್ರವನ್ನು ತಂದು ಮಕ್ಕಳಿಗೆ ಬೆಳಕು ನೀಡಲಾಗುತ್ತಿದೆ. ಆದ್ದರಿಂದ ನಮ್ಮ ಮಕ್ಕಳಿಗೆ ನಾವು ನೇತ್ರವನ್ನು ಕೊಡುವ ಉದ್ದೇಶದಿಂದ ಸ್ವಯಂ ಪ್ರೇರಿತನಾಗಿ ನೇತ್ರದಾನ್ ನೊಂದಣಿ ಮಾಡಿರುವುದಾಗಿ ಹೇಳಿದರು. ಪುನೀತ್ ರಾಜು ಕುಮಾರ್ ಅವರ ನೇತ್ರ ನಾಲ್ಕು ಜನರಿಗೆ ಬೆಳಕು ನೀಡಿದೆ ಹಾಗೆ ನನ್ನ ನೇತ್ರವು ನಾಲ್ಕು ಜನರಿಗೆ ಬೆಳಕು ಆಗಲಿ ಎಂದು ದೇವರಲ್ಲಿ ಬೇಡಿಕೊಂಡು ನೇತ್ರದಾನಕ್ಕೆ ನೊಂದಣಿ ಮಾಡಿರುವುದಾಗಿ ಹೇಳಿದರು.