Home / Top News / ಎಂಇಎಸ್ ಪುಂಡಾಟಿಕೆ ಮಟ್ಟಹಾಕಲು ರಾಜ್ಯದಲ್ಲಿ ಎಂಇಎಸ್ ಬ್ಯಾನ್ ಆಗಬೇಕು : ನೆನಪಿರಲಿ ಪ್ರೇಮ್

ಎಂಇಎಸ್ ಪುಂಡಾಟಿಕೆ ಮಟ್ಟಹಾಕಲು ರಾಜ್ಯದಲ್ಲಿ ಎಂಇಎಸ್ ಬ್ಯಾನ್ ಆಗಬೇಕು : ನೆನಪಿರಲಿ ಪ್ರೇಮ್

Spread the love

ಹುಬ್ಬಳ್ಳಿ : ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಹೀಗೆ ಮುಂದುವರೆದರೆ ರಾಜ್ಯದಲ್ಲಿ ಎಂಇಎಸ್ ಸಂಘಟನೆ ಬ್ಯಾನ್ ಆಗಬೇಕು ಎಂದು ನಟ ನೆನಪಿರಲಿ ಪ್ರೇಮ್ ಹೇಳಿದರು.

ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಸಿದ್ಧಾರೂಢರ ದರ್ಶನ ಪಡೆದ ಬಳಿಕ‌ ಮಾತನಾಡಿದ ಅವರು,
ಪುಂಡಾಟಿಕೆಯಿಂದ ದೇಶದಲ್ಲಿ ಎಂಇಎಸ್ ಗೆ ಒಳ್ಳೆಯ ಹೆಸರು ಬರಲ್ಲ. ರಾಜ್ಯದಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಭಾಂದವ್ಯದಿಂದ ಇದ್ದಾರೆ.
ಆ ಭಾಂದವ್ಯವನ್ನ ಹಾಳು ಮಾಡುವಂತಹ ಕೆಲಸಕ್ಕೆ ಎಂಇಎಸ್ ಕೈ ಹಾಕಬಾರದು.
ಯಾವುದೇ ಸಂಘಟನೆಗಳಿರಲಿ ಶಾಂತಿ ಕಾಪಾಡಬೇಕು ಎಂದರು.

ರಾಜ್ಯದಲ್ಲಿ ಮರಾಠಿ ಚಿತ್ರಗಳಿಗೂ ಹಾಗೂ ಹಿಂದಿ ಚಿತ್ರಗಳಿಗೂ ಅವಕಾಶ ನೀಡಲಾಗಿದೆ. ಎಂಇಎಸ್ ನವರು ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವದರಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಎಂಇಎಸ್ ಬ್ಯಾನ್ ವಿಚಾರದಲ್ಲಿ ಸರ್ಕಾರದ ನಿಲುವು ಏನಿದೆಯೋ ಗೊತ್ತಿಲ್ಲ.
ಆದ್ರೆ ಕನ್ನಡಿಗರ ಮೇಲಿನ ದಬ್ಬಾಳಿಕೆ ಸಹಿಸಲ್ಲ.
ಕನ್ನಡ ಚಿತ್ರರಂಗ ಹೋರಾಟಕ್ಕಿಳಿದರೆ ನಮ್ಮವರಿಗೆ ತೊಂದರೆಯಾಗಲಿದೆ ಅನ್ನೋ ಹಿನ್ನೆಲೆ ಶಾಂತರೀತಿಯಾಗಿದ್ದಾರೆ ಎಂದರು.

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]