ಬಾಲಿವುಡ್ ತಾರೆ ಕತ್ರಿನಾ ಕೈಫ್ ಮತ್ತು ವಿಕ್ಕಿಕೌಶಲ್ ರಾಜಸ್ಥಾನದ ಸವಾಯಿ ಮಾಧೋಪುರದ ಫೋರ್ಟ್ ಬರ್ವಾರದ ಸಿಕ್ಸ್ ಸೆನ್ಸ್‌ನಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ . ಆಪ್ತರನ್ನಷ್ಟೇ ಆಹ್ವಾನಿಸಿರುವ ಅದ್ಧೂರಿ ಮದುವೆಯಲ್ಲಿ , ಅತಿಥಿಗಳಿಗೆ ನೋ ಫೋಟೋ ನಿಯಮ ವಿಧಿಸಲಾಗಿತ್ತು . ಆದ್ರೀಗ ವಿಕ್ಕಿಕೌಶಲ್ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಮದುವೆಯ ಮಧುರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ
