Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಉದ್ಯಮಶೀಲತಾ ಪ್ರೇರಣಾ ಕಾರ್ಯಗಾರ ಉದ್ಘಾಟನೆ

ಉದ್ಯಮಶೀಲತಾ ಪ್ರೇರಣಾ ಕಾರ್ಯಗಾರ ಉದ್ಘಾಟನೆ

Spread the love

ಹುಬ್ಬಳ್ಳಿ : ಕೌಶಲ್ಯಾಭಿವೃದ್ಧಿ ಉದ್ದಿಮೆಶೀಲತೆ ಹಾಗೂ ಜೀವನೋಪಾಯ ಇಲಾಖೆ, ಧಾರವಾಡ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಹಾಗೂ ಅಭಿಯಾನ ಫೌಂಡೇಶನ್ ಹುಬ್ಬಳ್ಳಿ ಸಹಯೋಗದಲ್ಲಿ ಧಾರವಾಡದ ರಾಯಪುರ ಕೇಂದ್ರದಲ್ಲಿ 3 ದಿನಗಳ ಉದ್ಯಮಶೀಲತಾ ಪ್ರೇರಣಾ ಕಾರ್ಯಕ್ರಮ ಆಯೋಜಿಸಲಾಗಿದೆ.

ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಡಾ.ಚಂದ್ರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  ಕೌಶಲ್ಯವು ಪ್ರತಿಯೊಬ್ಬರಿಗೆ  ತುಂಬಾ ಅವಶ್ಯಕವಾದದ್ದು ಇದರಿಂದ ಸ್ವ-ಉದ್ಯೋಗವನ್ನು ಪ್ರಾರಂಭಿಸಬಹುದು. ಇತರರಿಗೂ  ಉದ್ಯೋಗಾವಕಾಶವನ್ನು ಒದಗಿಸಿ ಕೊಡಬಹುದು ಎಂದು ಶಭಿರಾರ್ಥಿಗಳಿಗೆ ತಿಳಿಸಿದರು.
ಸಿಡಾಕ್ ಜಂಟಿ ನಿರ್ದೇಶಕ ಚಂದ್ರಶೇಖರ.ಎಚ್.ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ ಶಿಭಿರಾರ್ಥಿಗಳು 3 ದಿನಗಳ ತರಬೇತಿಯ ಲಾಭವನ್ನು ಪಡೆಯಲು ತಿಳಿಸಿದರು.  ರೇಣುಕಾ ಎಜುಕೆಶನ್ ಸಂಸ್ಥೆಯ ಸುನಿತಾ ದಿವಟೆ ಮಾತಾನಾಡಿ ಸ್ವ-ಉದ್ಯೋಗ ಸ್ಥಾಪನೆಗೆ ಇರುವ ಅಡಚಣೆಗಳು ಹಾಗೂ ಅವುಗಳನ್ನು ನಿಭಾಯಿಸುವ ತಂತ್ರಗಳ ಬಗ್ಗೆ ತಿಳಿಸಿದರು.
ಒಟ್ಟು 2 ತಂಡಗಳಲ್ಲಿ 60 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ತರಬೇತಿ ದಿನಗಳಲ್ಲಿ ಉದ್ಯಮಶೀಲನಾಗುವ ಮಹತ್ವ ಹಾಗೂ ದಕ್ಷತೆಗಳು, ಉದ್ಯಮ ಸ್ಥಾಪನೆಗೆ ಅನುಸರಿಸುವ ಹಂತಗಳು, ಉದ್ಯಮಗಳ ಆಯ್ಕೆಯ ವಿಧಾನ, ಉದ್ಯೋಗಾವಕಾಶಗಳ ವಿವರಣೆ, ಸರಕಾರಿ ಯೋಜನೆಗಳು, ಬ್ಯಾಂಕ ಸಾಲ ಯೋಜನೆಗಳು ಹಾಗೂ ಉದ್ಯಮಿಗಳಿಂದ ಅನುಭವ ಹಂಚಿಕೆ ಪರೀಣಿತ ಅನುಭವಿಗಳಿಂದ ಭೊದಿಸಲಾಗುವುದು.
ಉದ್ಘಾಟನಾ ಸಮಾರಂಭದಲ್ಲಿ ರುಡ್ ಸೆಟ್ ಸಂಸ್ಥೆಯ ಜಗದಿಶ ಪೂಜಾರ, ಅಭಿಯಾನ ಫೌಂಡೇಶನ ಕಾಡೇಶಚನ್ನವರ, ಮೆರಿಟ್ಯುಡ್ ಸಂಸ್ಥೆಯ ನಿದೇಶಕ ರವೀಂದ್ರ ಪಡೆಸೂರ ಹಾಗೂ ಭುವನೇಶ್ವರಿ ಸಂಸ್ಥೆಯ ಸುಜಾತಾ ಮತ್ತು ರಾಜೇಶ್ ಶಿಂಧೆ ಉಪಸ್ಥಿತರಿದ್ದರು. ಸಿಡಾಕ್ ತರಬೇತುದಾರ ಮೌನೇಶ.ಆರ್.ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ರೋಹಿಣಿ. ಘಂಟಿ ವಂದಿಸಿದರು.

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]