ಹುಬ್ಬಳ್ಳಿ: ನಗರದಲ್ಲಿರುವ ಇನ್ನರ ವ್ಹೀಲ್ ಕ್ಲಬ್ ಗಳು ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಹಲವಾರು ಉಪಯುಕ್ತ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ ಎಂದು ಅಖಿಲ ಭಾರತ ಇನ್ನರ ವ್ಹೀಲ್ ಕ್ಲಬ್ ಗಳ ಸಂಘದ ಅಧ್ಯಕ್ಷೆ ಸರೋಜ ಕಟಿಯಾರ ತಿಳಿಸಿದ್ದಾರೆ.
ಇನ್ನರ್ ವೀಲ್ ಕ್ಲಬ್ ಹುಬ್ಬಳ್ಳಿ ಪಶ್ಚಿಮ ಶಾಖೆಯ ವತಿಯಿಂದ ಗೋಕುಲ ರಸ್ತೆಯಲ್ಲಿರುವ ವಾಕರಸಾ ಸಂಸ್ಥೆಯ ಕೇಂದ್ರ ಕಚೇರಿಯ ಎದುರಿಗೆ ನಿರ್ಮಿಸಲಾದ ಬಸ್ ಶಲ್ಟರ್ ನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.
ಇನ್ನರ ವ್ಹೀಲ್ ಕ್ಲಬ್ ಜಿಲ್ಲೆ 317 ವತಿಯಿಂದ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಈ ನಿಟ್ಟಿನಲ್ಲಿ ಹುಬ್ಬಳ್ಳಿಯ ಎಂಟು ಕ್ಲಬ್ ಗಳು ಕ್ರಿಯಾಶೀಲವಾಗಿದ್ದು ಇತರರಿಗೆ ಪ್ರೇರಣೀಯವಾಗಿದೆ ಎಂದು ಶ್ಲಾಘಿಸಿದರು.
ಇನ್ನರ್ ವೀಲ್ ಕ್ಲಬ್
ಹುಬ್ಬಳ್ಳಿ ಪಶ್ಚಿಮ ಶಾಖೆಯ ಅಧ್ಯಕ್ಷೆ ವಿಜಯಲಕ್ಷ್ಮೀ ಗದ್ವಾಲ ಮಾತನಾಡಿ ವಿವಿಧ ಕ್ಷೇತ್ರಗಳ ಸಾರ್ವಜನಿಕರಿಗೆ ಉಪಯುಕ್ತ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಪ್ರಯಾಣಿಕರಿಗೆ ಬಿಸಿಲು ಹಾಗೂ ಮಳೆಯಿಂದ ರಕ್ಷಣೆ ಒದಗಿಸುವ ದೃಷ್ಟಿಯಿಂದ ಅಂದಾಜು 1.5 ಲಕ್ಷ ರೂ. ವೆಚ್ಚದಲ್ಲಿ ಈ ಬಸ್ ಶೆಲ್ಟರ್ ನಿರ್ಮಿಸಲಾಗಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಕಾರ್ಯಕ್ರಮ ಗಳನ್ನು ಯೋಜಿಸಲಾಗಿದೆ ಎಂದು ಹೇಳಿದರು.
ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗಿಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾತನಾಡಿ ಇನ್ನರ ವ್ಹೀಲ್ ಕ್ಲಬ್ ಗಳು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಅಭಿನಂದನೀಯ. ಹುಬ್ಬಳ್ಳಿ ಪಶ್ಚಿಮ ಕ್ಲಬ್ ಸಾರಿಗೆ ಸಂಸ್ಥೆಯ ಹಲವಾರು ಪ್ರಯಾಣಿಕ ಸ್ನೇಹಿ ಉಪಕ್ರಮಗಳು ಹಾಗೂ ನೌಕರರ ಕ್ಷೇಮಾಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಿದೆ. ಈ ಬಸ್ ಶೆಲ್ಟರ್ ನಿಂದ ಸಾರಿಗೆ ಸಂಸ್ಥೆಯ ನೌಕರರು ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಆಟೋರಿಕ್ಷಾ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ ಇನ್ನರ ವ್ಹೀಲ್ ಕ್ಲಬ್ ಗಳ ಕೆಲಸ ಕಾರ್ಯಗಳು ಇತರರಿಗೆ ಮಾದರಿಯಾಗಿವೆ ಎಂದರು .
ಬಸ್ ಶೆಲ್ಟರ್ ಪ್ರಾಯೋಜಕರಾದ ನೀಡಿದ ವಿಜಯಲಕ್ಷ್ಮೀ ಮತ್ತು ರಾಜಪ್ಪ ಗದ್ವಾಲ ದಂಪತಿಯನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು.
ಹುಬ್ಬಳ್ಳಿ ಪಶ್ಚಿಮ ಕ್ಲಬ್ ಕಾರ್ಯದರ್ಶಿ ಪೂರ್ಣಿಮಾ ಕಾಡಂಬಿ ಕಾರ್ಯಕ್ರಮ ನಿರೂಪಿಸಿದರು.ಇನ್ನರ ವ್ಹೀಲ್ ಕ್ಲಬ್ 317 ಜಿಲ್ಲಾ ಅಧ್ಯಕ್ಷೆ ರತ್ನ ಭೇರೆ, ನಗರದ ವಿವಿಧ ಇನ್ನರ ವ್ಹೀಲ್ ಕ್ಲಬ್ ಗಳ ಪದಾಧಿಕಾರಿಗಳು, ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವಿಭಾಗೀಯ ತಾಂತ್ರಿಕ ಇಂಜಿನಿಯರ್ ಪ್ರವೀಣ ಈಡೂರ, ಆಡಳಿತಾಧಿಕಾರಿ ನಾಗಮಣಿ,ಡಿಪೊ ಮ್ಯಾನೇಜರ್ ವೈ.ಎಂ.ಶಿವರೆಡ್ಡಿ ಮತ್ತಿತರರು ಇದ್ದರು.