ಹುಬ್ಬಳ್ಳಿ : ೯ ವರ್ಷದ ಬಾಲಕನಿಗೆ ಎಲುಬಿನಲ್ಲಿ ಕ್ಯಾನ್ಸರ್ ಗಡ್ಡೆ ಕಾಣಿಸಿಕೊಂಡಿತ್ತು, ವಿವೇಕಾನಂದ ಜನರಲ್ ಆಸ್ಪತ್ರೆಯಲ್ಲಿ ವಿಶೇಷ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ಡಾ.ರಾಹುಲ್ ಮುಂಗೇಕರ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ತಿಂಗಳಿನಿಂದ ಎಡಗೈನ ಬುಜ ಭಾಗದ ಎಲುಬಿನಲ್ಲಿ ಬಾವು ಮತ್ತು ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಕಾನ್ಸರ್ ಇರುವುದು ದೃಢಪಟ್ಟಿದೆ.
ಕ್ಯಾನ್ಸರ್ ಪ್ರಮಾಣ ತೀವ್ರವಾಗಿತ್ತು, ನಾಲ್ಕು ಹಂತದಲ್ಲಿ ಮೂರು ತಿಂಗಳುಗಳ ಕಾಲ ಕಿಮೋಥೆರೆಪಿ ಮಾಡಲಾಯಿತು. ನಂತರ ಸತತ ನಾಲ್ಕು ಗಂಟೆ ಶಸ್ತ್ರ ಚಿಕಿತ್ಸೆ ನಡೆಯಿತು.
ಎಲುಬಿಗೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು ಎಂದರು.
ಈ ಮಾದರಿಯ ಚಿಕಿತ್ಸೆ ಪ್ರಮುಖ ನಗರಗಳಲ್ಲಿ ಮಾತ್ರ ಇದ್ದು, ಇದೀಗ ಹುಬ್ಬಳ್ಳಿಯ ವಿವೇಕಾನಂದ ಜನರಲ್ ಆಸ್ಪತ್ರೆಯಲ್ಲಿಯೂ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಬಾಲಕ ಈಗ ಸಂಪೂರ್ಣ ವಾಗಿ ಗುಣಮುಖರಾಗಿದ್ದು, ಹೆಚ್ಚಿನ ಆರೈಕೆ ಮುಂದುವರೆದಿದೆ.
ಪತ್ರಿಕಾಗೋಷ್ಠಿಯಲ್ಲಿ ಡಾ. ಕಿರಣ ಕಟ್ಟಿಮನಿ, ಡಾ. ಸಂಜಯ ಪವಾರ್, ಡಾ. ವಿನಯ ಪವಾರ್, ಡಾ. ರಾಘವೇಂದ್ರ ಬೋಸ್ಲೆ, ಸೇರಿದಂತೆ ಉಪಸ್ಥಿತರಿದ್ದರು.