ಹುಬ್ಬಳ್ಳಿ : ಇನ್ನೇನು ಕೋವಿಡ್ ಸೋಂಕು ಕಡಿಮೆಯಾಯ್ತು, ಅನ್ನುವಷ್ಟರಲ್ಲಿ ಎಸ್.ಡಿ. ಎಂ ಕಾಲೇಜಿನಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಬೆನ್ನಲ್ಲೇ ನಗರದ ಆದರ್ಶ ನಗರದ ರೋಟರಿ ಶಾಲೆಯಲ್ಲಿ ವಿದ್ಯಾರ್ಥಿಯೋರ್ವನಿಗೆ ದೃಢಪಟ್ಟಿದ್ದು ಮತ್ತಷ್ಟು ಆತಂಕ ಮನೆ ಮಾಡಿದ ಹಿನ್ನಲೆಯಲ್ಲಿ ಶಾಲೆಯಲ್ಲಿ ಕೋವಿಡ್ ಟೆಸ್ಟ್ ತ್ವರಿತವಾಗಿ ನಡೆಸಲಾಗುತ್ತಿದೆ. ನಿನ್ನೆ ಮಧ್ಯಾಹ್ನದ ವೇಳೆಗೆ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿತ್ತು. ಅಲ್ಲದೇ ಸೋಮವಾರದವರೆಗೆ ರಜ ಘೋಷಣೆ ಸಹ ಮಾಡಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಭೀತಿ ಮತ್ತಷ್ಟು ಆವರಿಸಿರುವದರಿಂದ ಶಾಲೆಯ ಆವರಣದಲ್ಲಿಯೇ ಸಾಮೂಹಿಕ ಸ್ವ್ಯಾಬ್ ಟೆಸ್ಟ್ ಮಾಡಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮುಂದಾದರು.
