ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯ 9ನೇ ತರಗತಿ ವಿದ್ಯಾರ್ಥಿಗೂ ವಕ್ಕರಿಸಿದ ಕೊರೊನಾ ವಕ್ಕರಿದ್ದು ಶಾಲೆಗೆ ರಜೆ ಘೋಷಸಲಾಗಿದೆ. ನಗರದ ಖಾಸಗಿ ಶಾಲೆಯ 9 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯ ಸಹೋದರಿ ಧಾರವಾಡದ SDM ಕಾಲೇಜಿನಲ್ಲಿ MBBS ವ್ಯಾಸಂಗ ಮಾಡುತ್ತಿದ್ದಾಳೆ.
MBBS ವಿದ್ಯಾರ್ಥಿನಿಗೆ ಪಾಸಿಟಿವ್ ಬಂದಿದ್ದರಿಂದ ಅವರ ಮನೆಯಲ್ಲಿರುವ ಕುಟುಂಬಸ್ಥರಿಗೆ ಕೊರೊನಾ ಟೆಸ್ಟ್ ಮಾಡಿಸಿದ್ದರಿಂದ ಬಾಲಕನಿಗೂ ಕೊರೊನಾ ಪಾಸಿಟಿವ್ ಧೃಡ ಪಟ್ಟಿದ್ದು,ನಗರದ ಆದರ್ಶನಗರದಲ್ಲಿರುವ G.V.JOSHI ರೋಟರಿ ಶಾಲೆಯ ಬಾಲಕನನ್ನು ಈಗಾಗಲೇ ಮನೆಯಲ್ಲಿಯೇ ಹೋಂ ಕ್ವಾರಂಟೈನ್ ಮಾಡಲಾಗಿದೆ.ಜೊತೆಗೆ ನಿನ್ನೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಇವತ್ತು ಮುಂಜಾನೆ ವರದಿ ಬಂದಿದೆ. ಶಾಲೆಯನ್ನು ಸಂಪೂರ್ಣವಾಗಿ ಸ್ಯಾನಿಟೈಜೆಷನ್ ಮಾಡಲಾಗುತ್ತಿದೆ.ಇಂದು ಮದ್ಯಾಹ್ನ ದಿಂದಲೆ ಶಾಲೆಯಿಂದ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ.
ಈ ಕುರಿತಂತೆ ಮಾತನಾಡಿದ ಪ್ರಾಂಶುಪಾಲ ನರೇಶ ಪಾಟೀಲ್ ಮುಂಜಾಗ್ರತಾ ಕ್ರಮವಾಗಿ ನಾಳೆ ಶಾಲೆಯಲ್ಲಿರುವ ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತದೆ. ಜೊತೆಗೆ ಸೋಮವಾರದವರೆಗೆ ರೋಟರಿ ಶಾಲೆಗೆ ರಜೆ ನೀಡಲಾಗಿದೆ ಎಂದರು.