ಈಗಾಗಲೇ ಬಿಜೆಪಿಯವರು ಮೂರ್ನಾಲ್ಕು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದ್ದಾರೆ. ಬಿಜೆಪಿ ಹೈ ಕಮಾಂಡ ಈ ನಿರ್ಧಾರ ಬಿಜೆಪಿ ಆಡಿತ ಇರುವಂತಹ ರಾಜ್ಯಗಳಲ್ಲಿ ಆಡಳಿತ ವೈಫಲ್ಯ ಎತ್ತಿ ತೋರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯವರು ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಮುಖ್ಯಮಂತ್ರಿಗಳ ಬದಲಾವಣೆ ಮಾಡುತ್ತಾ ಹೋಗುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರವರು ಲೇವಡಿ ಮಾಡಿದರು.
ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ಪಕ್ಷದ ನೂತನ ಸದಸ್ಯರಿಗೆ ಸನ್ಮಾನ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಸರ್ಕಾರ ಇರುವ ರಾಜ್ಯಗಳಲ್ಲಿ ಬಿಜೆಪಿ ವರಿಷ್ಠರು ಮುಖ್ಯಂಮತ್ರಿಗಳನ್ನು ಬದಲಾವಣೆ ಮಾಡುತ್ತಾ ಹೋಗುತ್ತಿದ್ದಾರೆ. ಈ ಹಿಂದೆ ರಾಜ್ಯದಲ್ಲಿಯು ಸಿಎಂ ಬದಲಾವಣೆ ಆಗಿದೆ. ಈಗ ಗುಜರಾತ ಸರದಿಯಾಗಿದೆ. ಕೊರೊನಾ ಮಾಹಾಮಾರಿ ಸಂದರ್ಭದಲ್ಲಿ ಆಯಾ ರಾಜ್ಯದಲ್ಲಿ ಬಿಜೆಪಿ ಆಡಳಿತ ವೈಫಲ್ಯ ಎದ್ದು ಕಂಡಿದೆ ಹಾಗಾಗಿ ಈಗ ಸಿಎಂ ಬದಲಾವಣೆ ಮಡಲಾಗುತ್ತಿದೆ ಎಂದು ಕುಟುಕಿದರು.
ಈಗಾಗಲೇ ಬಿಜೆಪಿಯ ನಾಲ್ಕು ಮುಖ್ಯಂಮತ್ರಿಗಳ ಬದಲಾವಣೆ ಆಗಿದೆ. ಇವರೆಲ್ಲರ ಆಡಳಿತ ಸರಿ ಇಲ್ಲ, ಕೊರೊನಾ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದನೆ ಮಾಡಿಲ್ಲ ಜೊತೆಗೆ ಭ್ರಷ್ಟಾಚಾರ ತುಂಬಿದೆ ಎಂಬ ಹಿನ್ನೆಲೆಯಲ್ಲಿ ಈಗ ಬಿಜೆಪಿಗರಿ ಸಿಎಂಗಳ ಬದಲಾವಣೆಯಲ್ಲಿ ತೊಡಗಿಕೊಂಡಿದ್ದಾರೆ. ಗುಜರಾತ ಅದರ ಮುಂದುವರೆದ ಭಾಗವಾಗಿದೆ ಎಂದು ಬಿಜೆಪಿ ಸಿಎಂ ಬದಲಾವಣೆ ನಡೆಯನ್ನು ಟೀಕೆ ಮಾಡಿದರು.