ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಗುರುನಾಥರೂಢರ ಪ್ರತಿಮೆಗೆ ಪೂಜೆ ಮಾಡಲು ಹೋಗಿದ್ದ ಯುವಕನೋರ್ವ ನೀರಲ್ಲಿ ಮುಳುಗಿ ಸಾವಿಗೀಡಾದ ಘಟನೆ ಸಂಭವಿಸಿದೆ
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾಮದ ಉಮೇಶಪ್ಪ ಜಾಲಿಹಾಳ ಎಂಬ 22 ವರ್ಷದ ಯುವಕನೇ ಪೂಜೆ ಮಾಡಲು ಹೋಗಿ ಸಾವಿಗೀಡಾಗಿರೋ ದುರ್ದೈವಿಯಾಗಿದ್ದಾನೆ.
ಘಟನೆ ನಡೆಯುತ್ತಿದ್ದ ಅಗ್ನಿಶಾಮಕ ದಳ ಹಾಗೂ ಸುರಕ್ಷಾ ಪಡೆ ಆಗಮಿಸಿ ಮೃತ ದೇಹವನ್ನ ಹೊರಗೆ ತೆಗೆದು, ಕಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ.
ಮೃತ ಉಮೇಶಪ್ಪ ದೇವಪ್ಪ ಜಾಲಿಹಾಳ ಐಟಿಐ ವಿದ್ಯಾರ್ಥಿಯಾಗಿದ್ದು, ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ಹಳೇಹುಬ್ಬಳ್ಳಿ ಠಾಣೆ ಪೊಲೀಸರು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ
Hubli News Latest Kannada News