ಹುಬ್ಬಳ್ಳಿ: ಕಳವು ಆರೋಪವನ್ನು ಪೋಲಿಸರಿಗೆ ತಿಳಿಸಿದ ಕಾರಣಕ್ಕೆ ಯುವಕನೊಬ್ಬನಿಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಇಲ್ಲಿನ ಕುಸುಗಲ್ ರಸ್ತೆಯ ಶೆಲ್ ಪೆಟ್ರೋಲ್ ಬಂಕ್ ಹತ್ತಿರದ ಎಳನೀರು ಅಂಗಡಿ ಬಳಿ ನಡೆದಿದೆ.
ವಿನೋಬಾನಗರದ ರಾಹುಲ್ ಅಲಿಯಾಸ್ ಬಬ್ಲೂ ಬಂಡಿ ಎಂಬಾತನೇ ಗಂಭೀರವಾಗಿ ಗಾಯಗೊಂಡಿದ್ದು, ಸಿಮೆಂಟ್ ಚಾಳದ ಪ್ರಭುರಾಜ ಕಲ್ಲೂಸಾ, ಜನತಾ ಕ್ವಾರ್ಟರ್ಸ್ ನ ಪ್ರಶಾಂತ ಬೊಮ್ಮಾಜಿ ಎಂಬುವವರೇ ಹಲ್ಲೇ ಮಾಡಿದವರಾಗಿದ್ದಾರೆ.
ರಾಹುಲ್ ಅಲಿಯಾಸ್ ಬಂಡಿ ಈ ಹಿಂದೆ ಕಳ್ಳತನ ಮಾಡಿರುವ ವಿಷಯವನ್ನು ಪೋಲಿಸರಿಗೆ ತಿಳಿಸಿದ್ದೆ ಘಟನೆಗೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಆರೋಪಿತರು ಎಳೆನೀರು ಕೊಚ್ಚುವ ಮಚ್ಚಿನಿಂದ ತಲೆಗೆ, ಎದೆಗೆ, ಕೈಗಳಿಗೆ ಬುಜಕ್ಕೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಪರಿಣಾಮ ಗಾಯಗೊಂಡಿರುವ ರಾಹುಲ್ ನನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕೇಶ್ವಾಪುರ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.