ಹುಬ್ಬಳ್ಳಿ: ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೇಳುವುದೆಲ್ಲ ಬರಿ ಸುಳ್ಳು. ಸಿದ್ಧರಾಮಯ್ಯ ಹಿಂದುಳಿದ ವರ್ಗದವರಿಗೆ ಏನು ಮಾಡಲಿಲ್ಲ. ಸಿದ್ಧರಾಮಯ್ಯನವರು ಬರಿ ಘೋಷಣೆ ಮಾಡಿದ್ದರು. ಗ್ರಾಮೀಣ ಭಾಗದ ಜನರು ಸಿದ್ದರಾಮಯ್ಯ ಹಿಂದುಳಿದವರಿಗೆ ಏನೂ ಮಾಡಲಿಲ್ಲ ಅಂತಾ ಹೇಳ್ತಾ ಇದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದರು.
ನಗರದಲ್ಲಿಂದು ಬಿಜೆಪಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು,
ಕಾಂಗ್ರೆಸ್ ನಾಯಕರಿಗೆ ಕೇಳಲು ಬಯಸುವೆ. ನೀವೂ ಏನು ಮಾಡಿದ್ದೀರಿ. ನಾವೂ ಏನು ಮಾಡಿದ್ದೇವೆ ಎನ್ನುವುದನ್ನು ಸವಾಲು ಹಾಕುವೆ. ಅವರು ಎಲ್ಲಿ ವೇದಿಕೆ ಕಲ್ಪಿಸಿದರು ಚರ್ಚೆಗೆ ಸಿದ್ದ ಎಂದರು.
ಸಿದ್ದರಾಮಯ್ಯ ಅವರ ಬೆಂಬಲಿಗ ಹೊಗಳುವ ಭಟ್ಟರ ಮೂಲಕ ಜೈಕಾರ ಹಾಕಿಸಿಕೊಳ್ಳುತ್ತಾರೆ. ಹೊಗಳುವ ಭಟ್ಟರ ಮೂಲಕ ಹೇಳಿಸಿಕೊಂಡು ಹಿಂದುಳಿದ ನಾಯಕ ಎಂದು ಬಿಂಬಿಸಿಕೊಂಡು ಬರ್ತಿದ್ದಾರೆ. ಮೋದಿ ಅವರ ಸಂಪುಟದಲ್ಲಿ 27 ಜನ ಹಿಂದುಳಿದ ದಲಿತರಿಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಅವರು ಹೇಳಿದರು.
ವಿಧಾನಪರಿಷತ್ ಚುನಾವಣೆ ಕುರಿತು ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುತ್ತೇವೆ. 15-16 ಸ್ಥಾನ ಗಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉದ್ಯೋಗ ಖಾತ್ರಿ ಯೋಜನೆಗೆ ಎರಡನೇ ಹಂತದ ಹಣ ಬಿಡುಗಡೆ ಆಗಬೇಕಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಎಂಟು ಎಂಟು ತಿಂಗಳು ಹಣ ಬಿಡುಗಡೆ ಆಗಿರಲಿಲ್ಲ.
ಬೆಳೆ ಹಾನಿ ವಿಚಾರದಲ್ಲಿ ಸ್ವತಃ ಸಿಎಂ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಿದ್ದಾರೆ. ನಾವೂ ಚುನಾವಣೆಯಲ್ಲೂ ಬ್ಯೂಸಿ ಇದ್ದೇವೆ. ಹಾಗೆ ರೈತರಿಗೆ ಪ್ರವಾಹ ಪರಿಹಾರ ಕಾರ್ಯದಲ್ಲೂ ತೊಡಗಿಸಿದ್ದೇವೆ. ಪರಿಹಾರಕ್ಕೆ ಇನ್ನೂ ಸರ್ವೆ ಕಾರ್ಯ ನಡೆಯುತ್ತಿದೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.