ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಾಹನಗರ ಪಾಲಿಕೆಯ ಚುನಾವಣೆಯಲ್ಲಿ ನಮ್ಮ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹಾಗಾಗಿ ಮೂರನೇ ಬಾರಿಗೆ ಮಹಾನಗರ ಪಾಲಿಕೆಯಲ್ಲಿ ಮೇಯರ್ ಮತ್ತು ಉಪಮೇಯರ್ ಬಿಜೆಪಿಯವರೇ ಆಗುವುದು ಸ್ಪಷ್ಟ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ತಿಳಿಸಿದರು.
ಹುಬ್ಬಳ್ಳಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಹು-ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಎರಡು ಬಾರಿ ಆಡಳಿತ ನಡೆಸಿದೆ. ಈ ಬಾರಿಯೂ ಜನರು ಆರ್ಶೀವಾದ ಮಾಡಿದ್ದಾರೆ. ಫಲಿತಾಂಶದಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಜನಪ್ರತಿನಿಧಿಗಳ ವಿಶೇಷ ಮತ ಹಾಕುವ ಮೂಲಕ 45 ಸ್ಥಾನ ನಾವು ಪಡೆಯಲಿದ್ದೇವೆ. ಅಲ್ಲದೇ ಪಕ್ಷೇತರರು ನಮ್ಮ ಸಂಪರ್ಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೇ ಮೇಯರ್, ಉಪ ಮೇಯರ್ ಆಗೋದ ಖಚಿತ ಹೇಳಿದರು.
*ಬೆಳಗಾವಿ-ಕಲಬುರ್ಗಿ ಪಾಲಿಕೆಗಳಲ್ಲಿಯು ಬಿಜೆಪಿಯವರೇ ಮೇಯರ್, ಉಪ ಮೇಯರ್.*
ಈಗಾಗಲೇ ಬೆಳಗಾವಿಯಲ್ಲಿ ನಮ್ಮವರೇ ಮೇಯರ್, ಉಪಮೇಯರ್ ಆಗಲಿದ್ದು, ಗುಲಬರ್ಗಾ ಮಹಾನಗರ ಪಾಲಿಕೆಯಲ್ಲಿಯು ನಮ್ಮ ಅಭ್ಯರ್ಥಿಗಳೇ ಅತಿ ಹೆಚ್ಚು ಆರಿಸಿ ಬಂದಿದ್ದಾರೆ. ಅಲ್ಲಿಯೂ ಜೆಡಿಎಸ್ ಬೆಂಬಲಕ್ಕಾಗಿ ನಾವು ಪ್ರಯತ್ನ ಮಾಡುತ್ತಿದ್ದೇವೆ. ಅಲ್ಲಿಯೂ ನಾವೇ ಮೇಯರ್ ಉಪಮೇಯರ್ ಆಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹು-ಧಾ ಮಹಾನಗರ ಪಾಲಿಕೆಯಲ್ಲಿ ಉಪಮೇಯರ್ ಸ್ಥಾನ ಈಗಾಗಲೇ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದು, ಉಮಮೇಯರ್ ಮೀಸಲು ವರ್ಗದಿಂದ ಯಾರು ಪಕ್ಷ ಅಭ್ಯರ್ಥಿ ಗೆದ್ದು ಬಂದಿಲ್ಲ. ಈಗ ನಮ್ಮದೇ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಬಂದಿರುವ 69 ನೇ ವಾರ್ಡಿನ ದುರ್ಗಮ್ಮ ಬಿಜವಾಡ ಅವರು ಪಕ್ಷಕ್ಕೆ ಬರುವುದಾಗಿ ಒಪ್ಪಿದ್ದಾರೆ. ಈಗಾಗಲೇ ಅದಕ್ಕೆ ಅವರು ಸಮ್ಮಿತಿ ಸೂಚಿಸಿದ್ದಾರೆ. ಹಾಗಾಗಿ ಉಪಮೇಯರ್ ಸ್ಥಾನ ಅವರಿಗೆ ನೀಡಬೇಕಾಗುತ್ತದೆ ಎಂದರು.
*ಕೆಪಿಸಿಸಿ ಅಧ್ಯಕ್ಷರು ತಮ್ಮ ಪ್ಲೇಟ್‌ನಲ್ಲಿ ಹೆಗ್ಗಣ ಬಿದ್ದಿರುವುದನ್ನು ನೋಡಬೇಕು.*
ಚುನಾವಣೆಯಲ್ಲಿ ಅಧಿಕಾರವನ್ನು ಯಾವ ರೀತಿ ದುರುಪಯೋಗ ಪಡಿಸಿಕೊಂಡಿದ್ದೇವೆ ಎಂಬುವುದನ್ನು ಡಿಕೆಶಿಯವರು ತೋರಿಸಲಿ. ಚುನಾವಣೆ ನಡೆಸುವುದು ಚುನಾವಣೆ ಆಯೋಗದ ಕೆಲಸ ಅದು ಸ್ವತಂತ್ರ ಸಂಸ್ಥೆ, ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕು. ಈ ರೀತಿಯಾಗಿ ರಾಜಕೀಯವಾಗಿ ಮಾತನಾಡುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಸುಖಾಸುಮ್ಮನೆ ಆರೋಪ ಮಾಡುವುದನ್ನು ಬಿಡಬೇಕು. ತಮ್ಮ ಊಟದ ಪ್ಲೇಟ್‌ನಲ್ಲಿ ಹೆಗ್ಗಣ ಬಿದ್ದಿದೆ. ಅದನ್ನು ನೋಡುವ ಬದಲು ನಮ್ಮ ಪ್ಲೇಟ್‌ನಲ್ಲಿನ ಬಿದ್ದ ನೋಣದ ಬಗ್ಗೆ ಮಾತನಾಡುತ್ತಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.