ಹುಬ್ಬಳ್ಳಿ: ಕಾಲೇಜಿನ ಜಾಗದ ವಿಷಯಕ್ಕೆ ಸಂಬಂಧಿಸದಂತೆ ಕಾಲೇಜಿಗೆ ಬೀಗ ಹಾಕಿರುವುದನ್ನು ವಿರೋಧಿಸಿದ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿಯೇ ಪ್ರತಿಭಟನೆಗೆ ಮುಂದಾದರು.
ಹೌದು.. ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ನಾಸ್ತಿಕ ಎನ್ನುವವರಿಂದ ಕಾಲೇಜಿಗ ಬೀಗ ಹಾಕಿದ್ದು,
ಪಟ್ಟಣದ ಗುಡ್ ನ್ಯೂಸ್ ಕಾಲೇಜಿಗೆ ಬೀಗ ಹಾಕಿದಕ್ಕೆ ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.
ಹಲವು ವರ್ಷಗಳ ಹಿಂದೆಯೇ ಜಾಗ ಕೊಟ್ಟ ಕಾರಣ ಇದೀಗ ಮತ್ತೆ ಜಾಗ ಬೇಕೆಂದು ನಾಸ್ತಿಕ ಎನ್ನುವವರಿಂದ ಕೋರ್ಟ್ ಮೊರೆ ಹೋಗಿದ್ದಾರೆ. ಈ ಹಿನ್ನೆಲೆ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಇನ್ನೂ
ಸ್ಥಳಕ್ಕೆ ಕಲಘಟಗಿ ಪೊಲೀಸರು ಸೇರಿದಂತೆ ತಹಶೀಲ್ದಾರ್ ಆಗಮಿಸಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಅಧಿಕಾರಿಗಳ ಮದ್ಯೆಸ್ಥಿಕೆಯಲ್ಲಿ ಹಾಕಿದ ಬೀಗ ತೆರೆಯಲಾಯಿತು.
ಜಾಹಿರಾತು…