ಹುಬ್ಬಳ್ಳಿ: ಪ್ರತಿಯೊಬ್ಬ ಮಾಂಸಾಹಾರಿಗಳ ಬಾಯಲ್ಲಿ ನೀರೂರುವುದು ಸಹಜವಾಗಿದೆ. ಇಂತಹ ಆಹಾರಗಳನ್ನು ಪೂರೈಸುವ ಎಸ್‌ಎಸ್‌ಕೆ ಸಾವಜಿ ಹೊಟೇಲ್ ಮಾಲೀಕರ ಸಂಘ(ರಿ)ವು ಲೋಗೋ ಮತ್ತು ಆ್ಯಪ್‌ನ್ನು ಇಂದು ಬಿಡುಗಡೆಗೊಳಿಸಲಾಯಿತು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಆ್ಯಪ್ ಮತ್ತು ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಸಂಘದ ಅಧ್ಯಕ್ಷ ರಾಮಚಂದ್ರ ಹಬೀಬ ಅವರು, ನಮ್ಮ ಸಾವಜಿ ಹೊಟೇಲ್‌ಗಳಿಗೆ ಒಂದು ನಮ್ಮ ಸಹಸ್ರಾರ್ಜುನ ಪ್ರತಿಮೆಯ ಲೋಗೋ ಹಾಗೂ ಆ್ಯಪ್‌ನ್ನು ಇದೀಗ ಉದ್ಘಾಟಿಸುತ್ತಿದ್ದೇವೆ ಎಂದರು
ಸಹಸ್ರಾರ್ಜುನ ಪ್ರತಿಮೆಯ ಲೋಗೋವನ್ನು ಬೇರೆ ಯಾವುದೇ ಹೋಟೆಲ್ ನವರು ಉಪಯೋಗಿ ಸಬಾರದು.ಒಂದು ವೇಳೆ ಉಪಯೋಗಿಸಿದಲ್ಲಿ ಸಂಘದ ವತಿಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹಲವಾರು ವರ್ಷಗಳಿಂದ ನಮ್ಮ ಮನೆಯಲ್ಲಿ ಮಾಡುವಂತಹ ಊಟವನ್ನು ಇದೀಗ ಹೊಟೇಲ್ ಮೂಲಕ ಎಲ್ಲ ನಾಗರಿಕರಿಗೆ ತಲುಪುವಂತೆ ಮಾಡುವ ಗುರಿಯೊಂದಿಗೆ ಸ್ಥಾಪಿಸಲಾದ ಸಂಘದ ಶಾಖೆಯನ್ನು ಈಗಾಗಲೇ ಗದಗ-ಬೆಟಗೇರಿಯಲ್ಲಿ ಆರಂಭಿಸಿದ್ದು, ಕೆಲ ದಿನಗಳಲ್ಲಿ ಬಾಗಲಕೋಟಿ ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದರು.
ಒಂದೇ ತರಹದ ಊಟ ಹಾಗೂ ರುಚಿ ಕಾಪಾಡಲು ಎಲ್ಲ ಸದಸ್ಯರಿಗೆ ಸಂಘ ಒಂದು ಬ್ರ್ಯಾಂಡ್ ಮಾಡಿಕೊಳ್ಳುತಿದ್ದು, ಆನ್‌ಲೈನ್ ಜೊಮೋಟೋ, ಸುಗ್ಗಿ ಮಾದರಿಯಲ್ಲಿ ಮನೆ ಮನೆಗೂ ಸಾವಜಿ ಊಟ ತಲುಪಿಸಲು ಸಾವಜಿ ಪುಡಿ ಆ್ಯಪ್ ಸಿದ್ಧಪಡಿಸಲಾಗಿದ್ದು, ಈ ಮೂಲಕ ಮನೆ ಮನೆಗೆ ಊಟ ತಲುಪಿಸುವ ವ್ಯವಸ್ಥೆಯನ್ನು ಹೊಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಕಾಂತ ನಾಕೋಡ, ನಾಗೇಂದ್ರಸಾ ಇರಕಲ್, ಗೋವಿಂದ ಮಿಸ್ಕಿನ, ಗಣಪತಸಾ ಮಿಸ್ಕಿನ, ಸಂತೋಷ ಭಾಂಡಗೆ, ರಮೇಶ ಧೋಂಗಡಿ, ತುಳಜಾರಾಮ ಕಟಾರೆ, ಗಣಪತಿ ಪವಾರ, ಅರುಣ ಬಾಕಳೆ, ಗೋಪಾಲಸಾ ಖೋಡೆ, ಅಮೃತ ಕಲಬುರ್ಗಿ, ನಾಗೂಸಾ ಬಾಕಳೆ ಇದ್ದರು.
ಜಾಹಿರಾತು…