ಹುಬ್ಬಳ್ಳಿ.: ಧಾರವಾಡ ಜಿಲ್ಲೆಯಲ್ಲಿ ತಕ್ಷಣಕ್ಕೆ ನೆರೆ ಪರಿಹಾರ ಕಾರ್ಯಕೈಗೊಳ್ಳಲು 7.5 ಕೋಟಿ ರೂಪಾಯಿಗಳ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಬೆಣ್ಣಿಹಳ್ಳದಿಂದ ಉಂಟಾಗುವ ನೆರೆ ಪರಿಸ್ಥಿತಿ ತಪ್ಪಿಸಲು ಶಾಶ್ವತ ಕ್ರಮ ಕೈಗೊಳ್ಳಲಾಗುವುದು ಎಂದು ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.
ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮಕ್ಕೆ ಭೇಟಿ ನೀಡಿದ ಅವರು, ಬೆಣ್ಣಿಹಳ್ಳದ ಪ್ರವಾಹದಿಂದ ಹಾನಿಗೊಳಗಾದ ಜಮೀನುಗಳಿಗೆ ಭೇಟಿ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡದರು.
ಜಿಲ್ಲೆಯಲ್ಲಿ ನವೆಂಬರ್ ತಿಂಗಳಿನಲ್ಲಿ ವಾಡಿಕೆ ಪ್ರಕಾರ 28 ಮಿ.ಮೀ ಮಳೆ ಆಗಬೇಕಿತ್ತು, ಈ ಬಾರಿ 112 ಮಿ.ಮೀ ಮಳೆ ಆಗಿದೆ. ಅನಿರೀಕ್ಷಿತ ಮಳೆಯಿಂದ 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹತ್ತಿ, ಮೆಣಸಿನಕಾಯಿ ಸೇರಿದಂತೆ ಹಲವು ಬೆಳೆಗೆ ಹಾನಿಯಾಗಿದೆ. ಕಲಘಟಗಿ ತಾಲೂಕಿನ ದೊಡ್ಡಕೆರೆ ಗ್ರಾಮದಲ್ಲಿ ಕೆರೆ ಏರಿ ಒಡೆದು ಹಾನಿಯಾಗಿದೆ. ಹಲವು ಮನೆಗಳು ಸಹ ಬಿದ್ದಿವೆ. ಸರ್ಕಾರ ಜಿ.ಪಿ.ಎಸ್ ಆಧಾರಿತ ಬೆಳೆ ಹಾನಿ ಸರ್ವೇಕ್ಷಣೆಗೆ ನವೆಂಬರ್ 30 ವೆರೆಗೆ ಅವಕಾಶ ನೀಡಿದೆ. ಅತಿವೃಷ್ಠಿ ಸಂಪೂರ್ಣ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ, ಭಾಗಶಃ ಹಾನಿಗೆ ಒಳಗಾದ ಮನೆಗಳಿಗೆ 50 ಸಾವಿರದಿಂದ 1 ಲಕ್ಷದವರೆಗೆ ಪರಿಹಾರ ನೀಡಲಾಗುತ್ತಿದೆ. ರೈತರಿಗೆ ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ನೆರೆಯಿಂದ ಹಾಳದ ಜಮೀನುಗಳಿಗೂ ಪರಿಹಾರ ನೀಡಲಾಗುವುದು. ರೈತರ ಖಾತೆಗೆ 8 ಕೋಟಿ ಪರಿಹಾರ ಧನ ಪಾವತಿಸುವ ಕಾರ್ಯವು ಚಾಲನೆಯಲ್ಲಿದೆ. ಸರ್ಕಾರ ಎಲ್ಲಾ ಪರಿಹಾರ ಧನಗಳನ್ನು ಪಾರದರ್ಶಕವಾಗಿ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಅಕಾಲಿಕ ಮಳೆಯಿಂದ ರಾಜ್ಯ ನಲುಗಿದೆ. ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ, ಕೇರಳ ಸಂಕಷ್ಟ ಪರಿಸ್ಥಿತಿಯಲ್ಲಿ ಇವೆ. ಅಪಾರ ಪ್ರಮಾಣ ಜೀವ ಹಾನಿ ಉಂಟಾಗಿದೆ. ಧಾರವಾಡದ ಜಿಲ್ಲೆಯಲ್ಲಿ ಮಳೆಗೆ ತುತ್ತಾಗಿ ನಾಲ್ಕು ಸಾವಿರ ಕೋಳಿಗಳು ಸತ್ತಿವೆ. ಅಳ್ನಾವರದಲ್ಲಿ 2 ಜನರು ಮೃತವಾಗಿವೆ.
ಪರಮಶಿವಯ್ಯ ವರದಿ ಆಧರಿಸಿ ಬೆಣ್ಣಿಹಳ್ಳ ತುಪ್ಪರಿಹಳ್ಳದ ಪ್ರವಾಹ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಬೆಣ್ಣೆಹಳ್ಳ ಧುಂಡಸಿಯಲ್ಲಿ ಹುಟ್ಟಿ 138 ಹರಿಯುತ್ತಿದೆ. ಹಾವೇರಿ, ಧಾರವಾಡ, ಗದಗ ಹಾಗೂ ಬಾಗಲಕೋಟೆಯಲ್ಲಿ ಅಲಮಟ್ಟಿಗೆ ಸೇರುತ್ತದೆ. ಈ ಹಳ್ಳವನ್ನು ಬೃಹತ್ ನಿರಾವರಿ ಇಲಾಖೆ ಅಡಿಗೆ ತಂದು ನೆರೆ ನಿರ್ವಹಣೆ ವಿಸ್ತೃತ ಯೋಜನಾ ವರದಿ ಸಿದ್ದಪಿಡಸಲಾಗಿದೆ. ಹಳ್ಳದ 22 ಟಿ.ಎಂ.ಸಿ ನೀರಿನ ಬಳೆಗೆ ಒತ್ತು ನೀಡಲಾಗುವುದು ಎಂದರು. ತುಪ್ಪರಿ ಹಳ್ಳದ ಯೋಜನೆ ಅನುಷ್ಠಾನಕ್ಕೆ ಜಲಮಂಡಳಿ ಅನುಮೋದನೆ ನೀಡಿದೆ. ತಾಂತ್ರಿಕ ದೋಷದಿಂದ ಹಲವು ರೈತರ ಖಾತೆ ಬೆಳೆ ಪರಿಹಾರಧನ ಜಮೆ ಆಗಿರುವುದಿಲ್ಲ ಇದರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳತ್ತೇನೆ ಎಂದರು. ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ 96584 ಹೆಕ್ಟೇರ್ ಕೃಷಿ ಹಾಗೂ 8760 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.
ಈ ಸಂದರ್ಭದಲ್ಲಿ ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡ್ರ ಸೇರಿದಂತೆ ರೈತರು ಅಧಿಕಾರಿಗಳು ಉಪಸ್ಥಿತರಿದ್ದರು.
ಜಾಹಿರಾತು..