Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ನ .28 ರಂದು ವಧು-ವರರ ಹಾಗೂ ಪಾಲಕರ ಪರಸ್ಪರ ಪರಿಚಯ ಬೃಹತ್ ಸಮಾವೇಶವನ್ನು

ನ .28 ರಂದು ವಧು-ವರರ ಹಾಗೂ ಪಾಲಕರ ಪರಸ್ಪರ ಪರಿಚಯ ಬೃಹತ್ ಸಮಾವೇಶವನ್ನು

Spread the love

ಹುಬ್ಬಳ್ಳಿ : ನಗರದ ಆನಂದ ಅಸೋಸಿಯೇಟ್ಸ್ ವತಿಯಿಂದ ಸರ್ವಧರ್ಮಗಳ ಎಲ್ಲ ವರ್ಗಗಳ ವಧು-ವರರ ಹಾಗೂ ಪಾಲಕರ ಪರಸ್ಪರ ಪರಿಚಯ ಬೃಹತ್ ಸಮಾವೇಶವನ್ನು ನ.28 ರಂದು ಬೆಳಿಗ್ಗೆ 9 ರಿಂದ ಧಾರವಾಡದ ಸರಸ್ವತಿ ನಿಕೇತನ, ಹುರಕಡ್ಲಿ ಅಜ್ಜ ಲಾ ಕಾಲೇಜು ಮತ್ತು ಮೃತ್ಯುಂಜಯ ಕಾಲೇಜು ಎದುರಿಗೆ ಹಮ್ಮಿಕೊಳ್ಳಲಾಗಿದೆ ಎಂದು ಆನಂದ ಅಸೋಸಿಯೇಟ್ಸ್ ವ್ಯವಸ್ಥಾಪಕ ನಿರ್ದೇಶಕ ಸುರೇಶ ಕುಪ್ಪಸಗೌಡರ ತಿಳಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಸಮಾವೇಶದಲ್ಲಿ ಸರ್ವಧರ್ಮಿಯರಾದ ಜಂಗಮ, ಲಿಂಗಾಯತ, ಪಂಚಮಸಾಲಿ, ಬಣಜಿಗ, ಬಣಗಾರ, ಶಿವಶಿಂಪಿ, ನೇಕಾರ, ಕುರುಹಿನ ಶೆಟ್ಟಿ, ಸಾಧರು, ಗಾಣಿಗೇರ, ಪಾಕನಾರೆಡ್ಡಿ, ಲಿಂಗಾಯತ ರಡ್ಡಿ, ಮರಾಠಾ, ಬ್ರಾಹ್ಮಣ, ಜೈನ, ಕುರುಬ, ವಿಶ್ವಕರ್ಮ, ಗಂಗಾಮತಸ್ಥರು ಸೇರಿದಂತೆ ಎಲ್ಲ ಧರ್ಮದ ವಧು-ವರರು ಹಾಗೂ ಪಾಲಕರು ಪಾಲ್ಗೊಳ್ಳಲಿದ್ದಾರೆ. ಅಂತರಜಾತಿ ವಿವಾಹ ಅಪೇಕ್ಷಿತರು, ಮರುವಿವಾಹ ಬಯಸುವ ವಿಚ್ಛೇದಿತ ಪತಿ-ಪತ್ನಿ, ವಿಧುರ-ವಿಧವೆಯರು ಸಹ ಭಾಗವಹಿಸಬಹುದು. ಅಲ್ಲದೇ ವಿವಾಹ ಸಂಬಂಧಗಳಲ್ಲಿ ಸಂಭವಿಸಬಹುದಾದ ನೂರಾರಿ ತೊಡಕು ತೊಂದರೆ ನಿವಾರಿಸಿ ಶೀಘ್ರ ಸಂಬಂಧ ಕಲ್ಪಿಸಲಾಗುವುದು ಎಂದರು.

ಅಭ್ಯರ್ಥಿಗಳನ್ನು ವೇದಿಕೆಗೆ ಕರೆಯದೆ ಸೂಕ್ತ ಸಂಬಂಧಿಗಳಿಗೆ ನೇರ ಪರಿಚಯಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ. 9343402308, 9611142568 ಗೆ ಸಂಪರ್ಕಿಸಬಹುದು ಎಂದರು.

ಜಾಹಿರಾತು…

About Santosh Naregal

Check Also

ಪ್ರಜ್ವಲ್ ಫೆನ್ ಡ್ರೈವ್ ಪ್ರಕರಣ ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು : ಮಾಜಿ ಸಿಎಂ ಬೊಮ್ಮಾಯಿ

Spread the loveಹುಬ್ಬಳ್ಳಿ : ಪ್ರಜ್ವಲ್ ರೇವಣ್ಣ ಫೆನ್ ಡ್ರೈವ್ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಸಂತ್ರಸ್ತರಿಗೆ ನ್ಯಾಯ ಸಿಗುವಂತಾಗಬೇಕು …

Leave a Reply

Your email address will not be published. Required fields are marked *

[the_ad id="389"]