ಧಾರವಾಡ : ಹುಬ್ಬಳ್ಳಿ ಧಾರವಾಡದಲ್ಲಿ ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ಒಳ ರಸ್ತೆಗಳನ್ನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಶೀಘ್ರದಲ್ಲೇ ಧಾರವಾಡ ಹುಬ್ಬಳ್ಳಿ ಸಮಗ್ರ ಅಭಿವೃದ್ಧಿ ಆಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತ ಪಡಿಸಿದರು.
ಧಾರವಾಡದಲ್ಲಿ ಒಳ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಳಿ ನಗರಗಳಲ್ಲಿನ ಎಲ್ಲಾ ವಾರ್ಡಗಳ ಒಳ ರಸ್ತೆಗಳ ಕಾಮಗಾರಿ ಪ್ರಕ್ರಿಯೆಗೆ ಸಿದ್ಧತೆ ನಡೆಸಲಾಗುವುದು. ಜೊತೆಗೆ ಜಲಜೀವನ್ ಮಿಷನ್ ಯೋಜನೆಯ ಮುಖಾಂತರ ಎಲ್ಲಾ ವಾರ್ಡಗಳಿಗೂ 24 ತಾಸು ನೀರಿನ ಸರಬರಾಜಿಗೆ ವ್ಯವಸ್ಥೆ ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಹುಬ್ಬಳ್ಳಿ ಧಾರವಾಡದ ಸಮಗ್ರ ಅಭಿವೃದ್ಧಿ ಆಗಲಿದೆ ಎಂದರು.
*ರಾಜಕಾರಣದಲ್ಲಿ ಯಾರೂ ಮಿತ್ರರು ಅಲ್ಲಾ ಶತ್ರುನು ಅಲ್ಲ.*
ಇನ್ನೂ ಕಲಬುರಗಿ ಮಹಾನಗರ ಪಾಲಿಕೆಯ ಕುರಿತು ಪ್ರತಿಕ್ರಿಯೆ ನಿಡಿ, ಎಲ್ಲಿ ಅತಂತ್ರ ಇರುತ್ತದೆಯೋ ಅಲ್ಲಿ ಗುದ್ದಾಟ ಇದ್ದೆ ಇರುತ್ತದೆ. ಅಧಿಕಾರ ಹಿಡಿಯಲಿಕ್ಕೆ ಏನೂ ತಂತ್ರಗಾರಿಕೆ ಬೇಕೋ ಅದನ್ನ ಮಾಡ್ತೀವಿ. ಅದಕ್ಕೆ ಬೇಕಾದಂತ ಕಾರ್ಯಚಟುವಟಿಕೆಯನ್ನು ನಮ್ಮ ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳು ಈಗಾಗಲೇ ನಡೆಸಿದ್ದಾರೆ. ಯಾರ ಜೊತೆ ದೋಸ್ತಿ ಮಾಡ್ತಾರೆ ಯಾರ ದೋಸ್ತಿ ಬಿಡ್ತಾರೆ ಅಂತಾ ಹೇಳೋಕೆ ನಾನು ಸೂಕ್ತ ವ್ಯಕ್ತಿ ಅಲ್ಲಾ. ರಾಜಕಾರಣದಲ್ಲಿ ಯಾರೂ ಮಿತ್ರರು ಅಲ್ಲಾ ಶತ್ರುನು ಅಲ್ಲ ಎಂದರು
ಇನ್ನೂ ಹುಬ್ಬಳ್ಳಿ ಧಾರವಾಡದಲ್ಲಿ ಪಾಲಿಕೆಯಲ್ಲಿ ನಾವು 100% ಅಧಿಕಾರ ಹಿಡಿಯುತ್ತೇವೆ. ಯಾರಾಗ್ತಾರೆ ಮೆಯರ್ ಅನ್ನೋದ್ ಹೇಳ್ಬೇಕಾದ್ರೆ ಗೆಜೆಟ್ ನೋಟಿಫಿಕೇಟಿನ್ ಆಗಬೇಕು, ಚುನಾವಣೆಯಲ್ಲಿ ಪ್ರಕ್ರಿಯೆ ಆಗಬೇಕು ಎಂದರು.