ಹುಬ್ಬಳ್ಳಿ : ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ತಾಲಿಬಾಣ ಉಗ್ರ ಸಂಘಟನೆ, ಅಫ್ಘಾನಿಸ್ತಾನದಲ್ಲಿ ದಿನದಿಂದ ದಿನಕ್ಕೆ ತನ್ನ ಹಿಡಿತ ಸಾಧಿಸುತ್ತಾ ಸಾಗುತ್ತಿದೆ. ಸದ್ಯ ಅಫ್ಘಾನನಲ್ಲಿರುವ ನಮ್ಮ ಭಾರತೀಯರನ್ನು ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ ನೇತೃತ್ವದಲ್ಲಿ ಸುರಕ್ಷತೆಗಾಗಿ ಸತತ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಹೇಳಿದರು.
ಹುಬ್ಬಳ್ಳಿ ಖಾಸಗಿ ಹೋಟೆಲನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ನೇತೃತ್ವದಲ್ಲಿ ನಡೆಯುತ್ತಿರುವ, ಅವಳಿನ ಪಾಲಿಕೆ ಚುನಾವಣೆ ಪೂರ್ವ ಸಿದ್ಧತೆ ಸಭೆಗೂ ಮುನ್ನ ಮಾತನಾಡುದ ಅವರು, ಜಗತ್ತಿನಲ್ಲಿ ನಡೆಯುತ್ತಿರುವ ಎಲ್ಲ ಘಟನೆಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತದೆ. ಪ್ರಸ್ತುತ ನಡೆಯುತ್ತಿರುವ ಅಫ್ಘಾನ ಬೆಳವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಗಮನದಲ್ಲಿ ಇದೆ. ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ಸರ್ಕಾರ ಸರ್ಮಥವಾಗಿದೆ. ಅಲ್ಲದೆ ದೇಶದಲ್ಲಿ ಐಎಸ್ಐಎಸ್ ಉಗ್ರರು ನುಸುಳಿ ದುಷ್ಟ ಕೃತ್ಯಗಳನ್ನು ಮಾಡಲು ತುಂಬಾ ಪ್ರಯತ್ನ ಮಾಡುತ್ತಿದ್ದರು. ಅದನ್ನು ನಾವು ಸಮರ್ಥವಾಗಿ ತಡೆದಿದ್ದೇವೆ. ಕಳೆದ ಏಳು ವರ್ಷಗಳಲ್ಲಿ ಗಡಿ ಭಾಗದಲ್ಲಿ, ಜಮ್ಮು ಕಾಶ್ಮೀರದಲ್ಲಿ ಒಂದೇರಡು ಘಟನೆಗಳು ಬಿಟ್ಟರೆ ದೇಶದಲ್ಲಿ ಬೇರೆಕಡೆಗೆ ಎಲ್ಲೂ ಒಂದು ಉಗ್ರ ಸಂಘಟನೆ ದುಷ್ಟಕೃತ್ಯ ಮಾಡಲು ಬಿಟ್ಟಿಲ್ಲ ಎಂದರು.
ಟೇರರಿಸ್ಟ್ ವಿಷಯದಲ್ಲಿ ಝೀರೋ ಟಾಲರೆನ್ಸ್ ಘೋಷಣೆ ನಮ್ಮದಾಗಿದೆ. ಅದಕ್ಕೆ ತಕ್ಕಂತೆ ಸೂಕ್ತ ಬಿಸಿ ಮುಟ್ಟಿಸಲು ನಮ್ಮ ಸರ್ಕಾರ ತಯಾರಿಲ್ಲಿ ಇದೆ. ಅಲ್ಲದೆ ನಿರಂತರವಾಗಿ ಕಾರ್ಯಾಚರಣೆಯನ್ನು ನಮ್ಮ ಸೈನಿಕರು ಮಾಡುತ್ತಲ್ಲೇ ಬರುತ್ತಿದ್ದಾರೆ. ಯಾವ ಕಾಲದಲ್ಲಿಯೂ ನಮ್ಮ ಪೊಲೀಸ್ ಬಲ ಅರೆ ಸೈನಿಕರ, ಸೇನಾ ಪಡೆಯ ಆತ್ಮಬಲ ಕುಂದಿಸುವ ಪ್ರಯತ್ನ ಮಾಡಿಲ್ಲ. ಪೊಲೀಸ್ ಬಲವನ್ನು, ಪೋಲಿಸ್ ಟೆಕ್ನಾಲಜಿಯನ್ನ ಸುಧಾರಿಸಲು ಭಾರತ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.