ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಇಚ್ಚಿಸುವ ಟಿಕೆಟ್ ಆಕಾಂಕ್ಷಿಗಳು, ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯಕ್ಕೆ ಬಂದು, ಪಕ್ಷದ ಅರ್ಜಿ ಫಾರ್ಮ ತೆಗೆದುಕೊಂಡು ದಿನಾಂಕ: 15-08-2021 ರ ಸಂಜೆ 5-00 ಗಂಟೆಯ ಒಳಗಾಗಿ ತುಂಬಿದ ಅರ್ಜಿಯ ಜತೆ, ಕೆಪಿಸಿಸಿ ವತಿಯಿಂದ ನಿರ್ಧರಿಸಲಾಗಿರುವ ಅರ್ಜಿ ಶುಲ್ಕವನ್ನು ಬ್ಯಾಂಕ್ ಡಿಡಿ ಮುಖಾಂತರ ಸಂದಾಯ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಪಕ್ಷದ ಕಚೇರಿಯಲ್ಲಿ ಬಂದು ಪಿ.ಆರ್.ಓ.(9538716421) ಇವರನ್ನು ಸಂಪರ್ಕಿಸುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಕಟಣೆ ತಿಳಿಸಿದೆ.
