ಶಾಸಕ ಜಮೀರ್ ಅಮ್ಮದ ಮನೆ ಮೇಲೆ ಇಡಿ ಮತ್ತು ಐಟಿ ದಾಳಿ ಹಿಂದೆ ಡಿ ಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಆರೋಪ ಮಾಡಿದ್ದು ಸೂಕ್ತವಲ್ಲ. ಹಾಗಾದರೆ ಡಿ ಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿಯಾದಾಗ ಯಾರ ಕೈವಾಡವಿತ್ತು ಎಂಬುದನ್ನು ಸಚಿವ ಎಸ್ ಟಿ ಸೋಮಶೇಖರ್ ಸ್ಪಷ್ಟಪಡಿಸಲಿ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಗಂಗಾಧರ ದೊಡವಾಡ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ ದೇಶದ ಉದ್ದಗಲಕ್ಕೂ ಐಟಿ ಮತ್ತು ಇಡಿ ದಾಳಿಗಳು ಕಳೆದ ನಾಲ್ಕಾರು ವರ್ಷಗಳಿಂದ ನಡೆಯುತ್ತಲೇ ಇವೆ.ಆದರೆ ಭಾರತೀಯ ಜನತಾ ಪಕ್ಷದಲ್ಲಿ ಗುರುತಿಸಿಕೊಂಡಂತಹ ಶಾಸಕ ಸಚಿವರ ಮನೆ ಮೇಲೆ ಆಗಲಿ ಉದ್ಯಮಿಗಳ ಮನೆ ಮೇಲೆ ಆಗಲಿ ಒಂದೂ ದಾಳಿ ನಡೆದಿಲ್ಲ ಇದೊಂದು ವಿಪರ್ಯಾಸದ ಸಂಗತಿ ಆಡಳಿತಾತ್ಮಕ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ವಿನಹ ರಾಜಕೀಯ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸಿದರೆ ಇಲಾಖೆಯ ಮೌಲ್ಯಗಳು ಕುಸಿದುಹೋಗುತ್ತವೆ ಎಂದೂ ಗಂಗಾಧರ ದೊಡವಾಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.
